ಎಐಡಿಎಸ್ಓ ಸಂತಾಪ
ದಾವಣಗೆರೆ, ಜೂ.11- ಜಾನಪದ ವಿದ್ವಾಂಸ ಡಾ. ಎಂ.ಜಿ. ಈಶ್ವರಪ್ಪ ಅವರ ನಿಧ ನಕ್ಕೆ ಎಐಡಿಎಸ್ಓ ದಾವಣಗೆರೆ ಜಿಲ್ಲಾ ಸಮಿ ತಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅವರು ಹಲವಾರು ಸಾಮಾಜಿಕ ಹೋರಾಟಗಳಿಗೆ ಬೆಂಬಲ ವಾಗಿದ್ದರು ಎಂದು ಜಿಲ್ಲಾ ಕಾರ್ಯದರ್ಶಿ ಟಿ.ಎಸ್. ಸುಮನ್ ತಿಳಿಸಿದ್ದಾರೆ.
2016ರಲ್ಲಿ ದಾವಣಗೆರೆಯಲ್ಲಿ ನಡೆದ ಎಐಡಿಎಸ್ಓನ ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಈಶ್ವರಪ್ಪ ಅವರು ಉದ್ಘಾಟಿಸಿದ್ದರು. ಇತ್ತೀಚೆಗೆ ಏರ್ಪಾಡಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125 ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಹಲವು ಕಾರ್ಯಕ್ರಮಗಳಿಗೆ ಬೆಂಬಲವಾಗಿದ್ದರು ಎಂದು ಅವರು ಹೇಳಿದ್ದಾರೆ.
ಕೋಮುವಾದದಂತಹ ವಿಭಜಕ ಚಿಂತನೆಗಳ ಕಟ್ಟಾ ವಿರೋಧಿಯಾಗಿದ್ದ ಈಶ್ವರಪ್ಪ ಅವರು ಪ್ರಜಾತಾಂತ್ರಿಕ ಹೋರಾಟಗಳಿಗೆ ಧ್ವನಿಯಾಗಿದ್ದರು. ಎಐಡಿಎಸ್ಓ ಸೇರಿದಂತೆ, ಅವರ ಕುಟುಂಬದವರು, ಸ್ನೇಹಿತರು ಹಾಗೂ ಪ್ರಜಾತಾಂತ್ರಿಕ ಮನಸ್ಸುಗಳಿಗೆ ಅಪಾರ ನೋವನ್ನುಂಟು ಮಾಡಿರುವ ಅವರ ಅಗಲುವಿಕೆ ಸಮಾಜಮುಖಿ ಹೋರಾಟಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಸುಮನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.