ಜಾನಪದ ವಿದ್ವಾಂಸ ಈಶ್ವರಪ್ಪ ನಿಧನಕ್ಕೆ ತೀವ್ರ ಶೋಕ

ಜಾನಪದ ವಿದ್ವಾಂಸ ಈಶ್ವರಪ್ಪ ನಿಧನಕ್ಕೆ ತೀವ್ರ ಶೋಕ

ಹರಿಹರ, ಜೂ.2- ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿಮಾನಿಗಳ ಬಳಗ, ಕಾರ್ಯನಿರತ ಪತ್ರಕರ್ತರ ಸಂಘ, ಪರಸ್ಪರ ಬಳಗ, ಜಾನಪದ ಸಾಹಿತ್ಯ ಪರಿಷತ್ತು,, ಸಾಹಿತ್ಯ ಸಂಗಮ, ಬಂಡಾಯ ಸಾಹಿತ್ಯ ಸಂಘಟನೆ, ಚಿಂತನಾ ಬಳಗ, ಮಕ್ಕಳ ಸಾಹಿತ್ಯ ಪರಿಷತ್ತು, ಅಖಿಲ ಭಾರತ ವೀರಶೈವ ಮಹಾಸಭೆ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ ಸೇರಿದಂತೆ ಅನೇಕ ಕನ್ನಡ ಪರ ಸಂಘಟನೆಗಳು ಜಾನಪದ ವಿದ್ವಾಂಸ, ಸಾಹಿತಿ, ಚಿಂತಕ ಡಾ. ಎಂ.ಜಿ. ಈಶ್ವರಪ್ಪ ನಿಧನಕ್ಕೆ ಕಂಬನಿ ಮಿಡಿದಿವೆ.

ಸಂತಾಪ ಸೂಚಕ ಸಭೆಯಲ್ಲಿ ಹಿರಿಯ ಸಾಹಿತಿ ಪ್ರೊ ಎಸ್.ಎ. ಭಿಕ್ಷವರ್ತಿಮಠ್ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಡಾ. ಈಶ್ವರಪ್ಪನವರ ಕೊಡುಗೆ ಅಪಾರ ಮತ್ತು ಅವಿಸ್ಮರಣೀಯ. ಅವರಲ್ಲಿದ್ದಂತಹ ಸಾಹಿತ್ಯ, ಸಾಂಸ್ಕೃತಿಕ ಅಭಿಮಾನವನ್ನು ಎಷ್ಟು ಹೇಳಿದರೂ ತೀರದು. 

ಅವರು ದಾವಣಗೆರೆ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ ಪರಿಣಾಮ ಹಾಗೂ ಸಾಂಸ್ಕೃತಿಕ ರಾಯಭಾರಿಯಾಗಿ, ಸಾಹಿತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ತ್ರಿವೇಣಿ ಸಂಗಮದ ವ್ಯಕ್ತಿತ್ವವನ್ನು ಕಂಡು, ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವಂತೆ ಮಾಡಿತ್ತು ಎಂದರು.

ಹಿರಿಯ ಸಾಹಿತಿ ಪ್ರೊ. ಸಿ‌.ವಿ. ಪಾಟೀಲ್ ಮಾತನಾಡಿ, ಬಂಡಾಯ ಸಾಹಿತ್ಯ ಸಮ್ಮೇಳನ ಮಾಡಿದ ಸಂದರ್ಭದಲ್ಲಿ ಈಶ್ವರಪ್ಪ ನಮಗೆ ಸಂಪೂರ್ಣ ಮಾರ್ಗದರ್ಶನ ಹಾಗೂ ಬೆಂಬಲ ನೀಡಿದ್ದರು. ಭಾರತ ಜ್ಞಾನ-ವಿಜ್ಞಾನ  ಕಾರ್ಯಕ್ರಮ ಮಾಡಿದಾಗ ಸಹ ಹೆಚ್ಚು ಪ್ರೋತ್ಸಾಹ ನೀಡಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಬಿ.ಪಿ. ಹರೀಶ್,
ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಎಸ್ ರಾಮಪ್ಪ, ಬಿಜೆಪಿ ಮುಖಂಡರಾದ ಹನಗವಾಡಿ ವೀರೇಶ್, ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಗುತ್ತೂರು ಹಾಲೇಶ್ ಗೌಡ್ರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಹೆಚ್. ಹೂಗಾರ್, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ,  ಹಿರಿಯ ಸಾಹಿತಿ ಜೆ ಕಲೀಂ ಬಾಷಾ, ದೂಡಾ ಮಾಜಿ ಸದಸ್ಯ ಹೆಚ್.ನಿಜಗುಣ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಂ ಚಿದಾನಂದ ಕಂಚಿಕೇರಿ, ಬಿ.ಬಿ. ರೇವಣ್ಣನಾಯ್ಕ್, ಖಜಾಂಚಿ ವಿಜಯ ಮಹಾಂತೇಶ್, ಎ ರಿಯಾಜ್ ಆಹ್ಮದ್, ರೇವಣಸಿದ್ದಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಶಾಂಭವಿ ನಾಗರಾಜ್, ಕಾರ್ಯದರ್ಶಿ ಹೆಚ್.ಸಿ. ಕೀರ್ತಿಕುಮಾರ್, ಟಿ ಇನಾಯತ್ ಉಲ್ಲಾ, ಶೇಖರಗೌಡ, ಸಿದ್ದಲಿಂಗಸ್ವಾಮಿ, ಮಂಜುನಾಥ್, ಪ್ರವೀಣ್, ರಾಜನಹಳ್ಳಿ ಮಂಜುನಾಥ್, ವಿಶ್ವನಾಥ, ಮಂಜಾನಾಯ್ಕ್, ಸುರೇಶ್ ಕುಣೆಬೆಳಕೆರೆ, ಚಂದ್ರಶೇಖರ್, ಇರ್ಫಾನ್,  ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶ್, ಕಾರ್ಯದರ್ಶಿ ಎನ್.ಇ. ಸುರೇಶ್, ಚಿಂತನಾ ಬಳಗದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ, ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಪ್ರಾನ್ಸಿಸ್, ಗೀತಾ ಕೊಂಡಜ್ಜಿ, ಇಂದೂಧರ್ ಸ್ವಾಮಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಪಿ.ಜೆ. ಮಹಾಂತೇಶ್,  ಕನ್ನಡ ಪರ ಸಂಘಟನೆ ಮುಖಂಡರಾದ ಹೆಚ್.ಬಿ. ರುದ್ರಗೌಡ ಯಕ್ಕೆಗೊಂದಿ,  ರಮೇಶ್ ಮಾನೆ,, ಪ್ರೀತಂ ಬಾಬು, ಎಸ್ ಗೋವಿಂದ್, ಸೇರಿದಂತೆ ಇತರರು ಕಂಬನಿ ಮಿಡಿದಿದ್ದಾರೆ.              

error: Content is protected !!