ಗಾಂಜಾ ಮಾರಾಟಕ್ಕೆ ಯತ್ನ

ದಾವಣಗೆರೆ, ಜೂ. 2- ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎನ್‌ಹೆಚ್ 48 ರಸ್ತೆ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಹೊರಪೇಟೆಯ ಸೈಯದ್ ನೂರಲ್ಲಾ ಹಾಗೂ ನಬೀವುಲ್ಲಾ ಬಂಧಿತರು. ಇವರಿಂದ 1 ಲಕ್ಷ ರೂ. ಮೌಲ್ಯದ 1140 ಗ್ರಾ.ಂ ತೂಕದ ಗಾಂಜಾ ಹಾಗೂ 1 ದ್ವಿಚಕ್ರ ವಾಹನ ವಶ ಪಡಿಸಿಕೊಳ್ಳಲಾಗಿದೆ.

ಕೆಟಿಜೆ ನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸುನಿಲ್ ಕುಮಾರ್ ಹೆಚ್.ಎಸ್, ಸಿಬ್ಬಂದಿಗಳಾದ ಹರೀಶನಾಯ್ಕ, ಪುರುಷೋತ್ತಮ್ಮ, ಮಂಜನಗೌಡ, ವಿರೇಶ್ ಕುಮಾರ್ ಆರೋಪಿ ಪತ್ತೆ ಕಾರ್ಯದಲ್ಲಿದ್ದರು.

error: Content is protected !!