ಶಿಕ್ಷಕರ ಸಮಸ್ಯೆಗಳ ಈಡೇರಿಕೆಗೆ ಡಿ.ಟಿ. ಶ್ರೀನಿವಾಸ್‌ ಆಯ್ಕೆ ಸೂಕ್ತ

ದಾವಣಗೆರೆ, ಜೂ. 2-  136 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ಕಾಯ್ದೆಗಳನ್ನು ರೂಪಿಸಿ ಜಾರಿಗೊಳಿಸಲು ವಿಧಾನ ಪರಿಷತ್ ನಲ್ಲಿ ಬಹುಮತ ಅಗತ್ಯವಾಗಿದ್ದು, ಶಿಕ್ಷಕರು ಹಾಗೂ ಉಪನ್ಯಾಸಕರು ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಅವರನ್ನು ಗೆಲ್ಲಿಸಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಳನೇ ವೇತನ ಆಯೋಗದ ಜಾರಿ, ಎನ್‌ಪಿಎಸ್‌ ನಿಂದ ಓಪಿಎಸ್ ಆದೇಶ ಸೇರಿ ದಂತೆ ಶಿಕ್ಷಣ ಕ್ಷೇತ್ರದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದರು. ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು ಗೆಲ್ಲಿಸಲು ಹೊನ್ನಾಳಿ, ಚನ್ನಗಿರಿ ಮತದಾರ ರಲ್ಲಿ ಹಾಗೂ ಈಶಾನ್ಯ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ ಅವರಿಗೆ ಹರಪನಹಳ್ಳಿ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಬಿ.ಹೆಚ್‌. ಉದಯಕುಮಾರ್, ಡಿ. ಶಿವಕುಮಾರ್, ಕೆ.ಎನ್. ಮಂಜುನಾಥ್, ಕೆ.ಜಿ. ರಹಮತ್ ವುಲ್ಲಾ ಉಪಸ್ಥಿತರಿದ್ದರು. 

error: Content is protected !!