ದಾವಣಗೆರೆ, ಜೂ. 2- ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ರೈತ ಮುಖಂಡ ಬಲ್ಲೂರು ರವಿಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರ ಶೇ.40 ರಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದು, ಆದರೆ ಕೇಂದ್ರ ಸರ್ಕಾರ ಶೇ. 60 ರಷ್ಟು ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಇನ್ನೂ ಬಿಡುಗಡೆ ಮಾಡಿಲ್ಲ. ಕೂಡಲೇ ಬಿಡುಗಡೆ ಮಾಡದಿದ್ದರೆ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಚಳವಳಿ ರೂಪಿಸಲಾಗು ವುದು ಎಂದು ರೈತ ಮುಖಂಡರಾದ ಎಂ.ಪಿ. ಕರಿಬಸಪ್ಪಗೌಡ, ಮಿಯ್ಯಾಪುರ ತಿರು ಮಲೇಶ್, ಹೆಬ್ಬಾಳ್ ರಾಜಯೋಗಿ, ಶಿವಮೊಗ್ಗ ರುದ್ರೇಶ್ ಕಶೆಟ್ಟ ಎಚ್ಚರಿಸಿದ್ದಾರೆ.