ದಾವಣಗೆರೆ, ಮೇ 29- ಇತ್ತೀಚೆಗೆ ಚನ್ನಗಿರಿ ಪೊಲೀಸ್ ಠಾಣೆಯ ಮುಂದೆ ನಡೆದ ಪ್ರತಿಭಟನೆ ವೇಳೆ ಕೆಲ ಯುವಕರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ವೀಡಿಯೋ ಹರಿದಾಡುತ್ತಿದ್ದು, ಇದನ್ನು ಪರಿಶೀಲಿಸಿದಾಗ ಪಾಕ್ ಪರ ಘೋಷಣೆ ಕಂಡು ಬಂದಿಲ್ಲ.
ಬದಲಾಗಿ `ಪೊಲೀಸರಿಗೆ ಧಿಕ್ಕಾರ’ ಎಂದು ಕೂಗಲಾಗಿದೆ. ಸಾರ್ವಜನಿಕವಾಗಿ ಪಾಕ್‌ಪರ ಘೋಷಣೆ ಕೂಗಿರುವ ವೀಡಿಯೋ ಲಭ್ಯವಾದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಅಥವಾ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದರೆ ಕಾನೂನು ಕ್ರಮ ಕೈಗೊಳ್ಳಳಾಗುವುದು. ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಬಾರದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.