ಮಹಾನಗರ ಪಾಲಿಕೆಯ ವಲಯ ಕಚೇರಿಗಳಿಗೆ ವಾರ್ಡ್‍ಗಳ ಸ್ಥಳಾಂತರ

ದಾವಣಗೆರೆ, ಮೇ 28 – ಸಾರ್ವಜನಿಕರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಹಾಗೂ ಮಹಾನಗರ ಪಾಲಿಕೆಯ ಸುಗಮ ಆಡಳಿತ ಹಿತದೃಷ್ಟಿಯಿಂದ ದಾವಣಗೆರೆ ಮಹಾನಗರ ಪಾಲಿಕೆಯ ವಲಯ ಕಚೇರಿಗೆ ಸಂಬಂಧಿಸಿದಂತೆ ಕೆಲವು ವಾರ್ಡ್‍ಗಳನ್ನು ಸ್ಥಳಾಂತರ ಮಾಡಲಾಗಿದೆ.

ಸ್ಥಳಾಂತರಗೊಳಿಸಿದ ವಿವರ:– ವಲಯ ಕಚೇರಿ-02 ರಲ್ಲಿದ್ದ ವಾರ್ಡ್ ನಂ- 18, 19 ಮತ್ತು  20 ನ್ನು ವಲಯ ಕಚೇರಿ-1ಕ್ಕೆ ಸ್ಥಳಾಂತರಿಸಲಾಗಿದೆ. ವಲಯ ಕಚೇರಿ- 03 ರಲ್ಲಿದ್ದ ವಾರ್ಡ್ ನಂ-31 ಮತ್ತು 41 ನ್ನು ವಲಯ ಕಚೇರಿ-2 ಕ್ಕೆ ಸ್ಥಳಾಂತರಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ತಿಳಿಸಿದ್ದಾರೆ.

error: Content is protected !!