ಕೆ.ಎನ್.ಹಳ್ಳಿ : ಇಂದು ಹರಿಹರ ತಾ. ಗ್ರಾ.ಪತ್ರಿಕಾ ವಿತರಕರ ಸ್ನೇಹ ಸಮ್ಮೇಳನ

ಮಲೇಬೆನ್ನೂರು ಸಮೀಪದ ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ 11.30ಕ್ಕೆ ಹರಿಹರ ತಾಲ್ಲೂಕು ಗ್ರಾಮಾಂತರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪತ್ರಿಕಾ ವಿತರಕರ ಸ್ನೇಹ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. 

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಕೀಲ ಮಲ್ಲಿಕಾರ್ಜುನ್ ಕಲಾಲ್ ಕಾನೂನು ಅರಿವು ಉಪನ್ಯಾಸವನ್ನು ಮತ್ತು ಪತ್ರಿಕಾ ವಿತರಕರಿಗೆ ಕಾರ್ಮಿಕ ಇಲಾಖೆಯ ಸೌಲಭ್ಯಗಳ ಕುರಿತು ಕಾರ್ಮಿಕ ಇಲಾಖೆ ಅಧಿಕಾರಿ ಚಿಕ್ಕಣ್ಣ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ಪ್ರಸಾರಾಂಗ ವ್ಯವಸ್ಥಾಪಕ ನಂದಗೋಪಾಲ್, ಕನ್ನಡ ಪ್ರಭ ಪ್ರಸಾರಣಾ ವಿಭಾಗದ ಶಿವರಾಜ್, ಗ್ರಾಂ.ಪಂ. ಮಾಜಿ ಅಧ್ಯಕ್ಷ ಜಿ. ಮಂಜುನಾಥ್, ನಿವೃತ್ತ ಮುಖ್ಯೋಪಾಧ್ಯಾಯ ಹೆಚ್.ಎನ್. ತಿಪ್ಪೇಶ್ ಭಾಗವಹಿಸಲಿದ್ದಾರೆ.

ಹರಿಹರ ತಾ. ಗ್ರಾಮಾಂತರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ  ಕೆ. ನಾಗೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕ ವರದಿಗಾರ ಹಾಗೂ ಶಿಕ್ಷಕ ಕೆ.ಎನ್. ಹಳ್ಳಿ ನಾಗೇಂದ್ರಪ್ಪ ತಿಳಿಸಿದ್ದಾರೆ.

error: Content is protected !!