ಕರ್ನಾಟಕ ಖೋ- ಖೋ ಅಸೋಸಿಯೇಷನ್ ಮತ್ತು ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಸಿದ್ದಗಂಗಾ ಶಾಲೆಯ ಆವರಣದಲ್ಲಿ ರಾಷ್ಟ್ರ ಮತ್ತು ರಾಜ್ಯ ಖೋ- ಖೋ ರೆಫ್ರೀಯನ್ಸ್ ವರ್ಕ್ ಶಾಪ್ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಖೋ ಖೋ ಅಸೋಸಿ ಯೇಷನ್ ಅಧ್ಯಕ್ಷ ಲೋಕೇಶ್ವರ ಕಾರ್ಯಾಗಾರ ಉದ್ಘಾಟಿಸುವರು. ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ತ್ರಿಲೋಕ್ ಸಿಂಗ್ ಅಧ್ಯಕ್ಷತೆ ವಹಿಸುವವರು. ಕೆ ಎಸ್ ಕೆ ಕೆ ಎ ಛೇರ್ಮನ್ ಕೆ. ಪಿ. ಪುರುಷೋತ್ತಮ, ಗೌರವ ಕಾರ್ಯದರ್ಶಿ ಆರ್. ಮಲ್ಲಿಕಾರ್ಜುನ್ , ಸಿದ್ದಗಂಗಾ ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಯುವ ಸಬಲೀಕಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿ ಬಾಯಿ, ಜಿಲ್ಲಾ ಖೋ-ಖೋ ಸಂಸ್ಥೆಯ ಜಿ.ಡಿ.ಎಸ್. ಮೂರ್ತಿ, ಡಿ ಡಿಕೆಕೆಎ ಕಾರ್ಯದರ್ಶಿ ಜೆ. ರಾಮಲಿಂಗಪ್ಪ, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಚಂದ್ರಶೇಖರ್ ಮತ್ತಿತರರು ಭಾಗವಹಿಸುವವರು.