ನಮನ ಅಕಾಡೆಮಿ (ದಾವಣಗೆರೆ), ಭಾರತ ಬೆಸಿಲಿಕ ಸ್ಪೋರ್ಟ್ಸ್ ಅಂಡ್ ಲೀಶರ್, ಶ್ರೀಲಂಕಾ ಜಂಟಿಯಾಗಿ ಇಂಡೋ-ಶ್ರೀಲಂಕಾ ಸಾಂಸ್ಕೃ ತಿಕ ವಿನಿಮಯ ಕಾರ್ಯಕ್ರಮವು ಇಂದು ಸಂಜೆ 6 ಗಂಟೆಗೆ ಬಿಐಇಟಿ ಕ್ಯಾಂಪಸ್‌ನಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಮನೂರು ಶಿವಶಂಕರಪ್ಪ, ಡಾ. ಎಂ.ಜಿ. ಈಶ್ವರಪ್ಪ, ರೋಶನ್ ಸಿಲ್ವಾ ಉಪಸ್ಥಿತರಿರುವರು. ಗೌರವ ಅತಿಥಿಗಳಾಗಿ ಹೆಚ್.ಬಿ. ಮಂಜುನಾಥ್ ಆಗಮಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎನ್. ಗೋಪಾಲಕೃಷ್ಣ ವಹಿಸುವರು.
January 10, 2025