ನಗರದ ಜಿ.ಎಂ. ವಿವಿಯಲ್ಲಿ ಇಂದು `ಮಲ್ಲಿಕಾ 24.0′

ದಾವಣಗೆರೆ, ಮೇ 23- ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಮಲ್ಲಿಕಾ 24.0 ಸಾಂಸ್ಕೃತಿಕ ಹಬ್ಬವನ್ನು ನಾಳೆ ದಿನಾಂಕ 24 ಹಾಗೂ 25ರಂದು ಆಚರಿಸಲಾಗುತ್ತದೆ ಎಂದು ಕಾರ್ಯಕ್ರಮದ ಸಂಯೋಜಕ ಡಾ.ಕಿರಣ್ ಕುಮಾರ್ ಹೆಚ್.ಎಸ್. ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಈ ಸಮಾರಂಭ ಇಂಟರ್ ಕಾಲೇಜ್ ಫೆಸ್ಟಿವಲ್ ಆಗಿದ್ದು, ಜಿ.ಮಲ್ಲಿಕಾರ್ಜುನಪ್ಪ ತೆರೆದ ಸಭಾಂಗಣದಲ್ಲಿ ಸಂಜೆ 5.30 ರಿಂದ ಆರಂಭವಾಗಲಿದೆ.

ಮೊದಲ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಸ್ಯಗಾರ್ತಿ  ಸುಧಾ  ಬರಗೂರು ಭಾಗವಹಿಸಲಿದ್ದಾರೆ. ಶ್ರೀ ಶೈಲ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಜಿ.ಎಂ. ಪ್ರಸನ್ನಕುಮಾರ್, ಆಡಳಿತಾಧಿಕಾರಿ ವೈ.ಯು. ಸುಭಾಶ್ಚಂದ್ರ, ವಿವಿ ಕುಲಪತಿ ಡಾ.ಶಂಖಪಾಲ್, ಉಪ ಕುಲಪತಿ ಡಾ.ಮಹೇಶಪ್ಪ, ರಿಜಿಸ್ಟ್ರಾರ್ ಡಾ.ಸುನಿಲ್ ಕುಮಾರ್ ಇತರರು ಭಾಗವಹಿಸಲಿದ್ದಾರೆ.

ಎರಡನೇ ದಿನ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡ್ ಅವರಿಂದ ಮನರಂಜನೆ ಕಾರ್ಯಕ್ರಮವಿದೆ. ಸಂಸದ ಜಿ.ಎಂ. ಸಿದ್ದೇಶ್ವರ, ವಿವಿ ಕುಲಾಧಿತಿ ಜಿ.ಎಂ. ಲಿಂಗರಾಜ್ ಇತರರು ಭಾಗವಹಿಸಲಿದ್ದಾರೆ ಎಂದರು. ಸಹ ಪ್ರಾಧ್ಯಾಪಕ ಸಂತೋಷ್ ಕುಮಾರ್ ಮಾತನಾಡಿ, ಪ್ರತಿಭಾನ್ವಿತ ವಿದ್ಯಾ ರ್ಥಿಗಳಿಗೆ 10 ಗ್ರಾಂ ಚಿನ್ನದ ನಾಣ್ಯ ನೀಡಿ ಗೌರವಿಸ ಲಾಗುವುದು. ಈ  ಬಾರಿ ಅತಿ ಹೆಚ್ಚು ಅಂದರೆ 20 ವಿದ್ಯಾ ರ್ಥಿಗಳು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ವೀರಗಂಗಾಧರ ಸ್ವಾಮಿ, ಪ್ರೊ.ಬಸವರಾಜ್, ತೇಜಸ್ವಿ ಕಟ್ಟಿಮನಿ ಇದ್ದರು.

error: Content is protected !!