ಹರಿಹರ: ಬಸ್ ಕಿಟಕಿಯಿಂದ ಉಗುಳಿದ ವೃದ್ಧನಿಗೆ ದಂಡ ಹಾಕಿದ ಪೊಲೀಸರು

ಹರಿಹರ,ಮೇ 23- ನಗರದ ಕೆ.ಎಸ್.ಆರ್.ಟಿ.ಸಿ ಬಸ್‌ಸ್ಟ್ಯಾಂಡ್‌ನಲ್ಲಿ     ಬಸ್ಸಿನಲ್ಲಿ ಕುಳಿತುಕೊಂಡು ಗುಟ್ಕಾ ಜಗಿದು ಕಿಟಕಿಯಿಂದ ಉಗಿಯುತ್ತಿದ್ದ  ವೃದ್ದನಿಗೆ  ಪೊಲೀಸರು 100 ರೂ. ದಂಡ ಹಾಕಿದ್ದಾರೆ.  

ಇಲ್ಲಿನ ನಿಲ್ದಾಣವನ್ನು ಸ್ವಚ್ಚತೆಯಿಂದ ಇಡಲು ಸಾರಿಗೆ ಇಲಾಖೆಯ ಸಿಬ್ಬಂದಿಗಳು ಹರ ಸಾಹಸ ಪಡುತ್ತಾರೆ. ಊರಿಂದ ಊರಿಗೆ ಪ್ರಯಾಣ ಮಾಡುವ ಪ್ರಯಾಣಿಕರು ನಿಲ್ದಾಣದಲ್ಲಿ, ಎಲ್ಲೆಂದರಲ್ಲಿ ಕಸ ಹಾಕುವುದು. ಎಲೆ ಅಡಿಕೆ, ಗುಟ್ಕಾ  ತಿಂದು ಉಗುಳುವುದು ಮತ್ತು ಶೌಚಾಲಯ  ಇದ್ದರೂ ಸಹ ಕಾಂಪೌಂಡ್ ಬಳಿ ನಿಂತು ಮೂತ್ರ ವಿಸರ್ಜನೆ ಮಾಡುವುದು ನಿತ್ಯವೂ ನಡೆದೇ ಇದೆ. ಹಾಗಾಗಿ ಪೊಲೀಸರು ದಂಡ ಹಾಕಲು ಶುರು ಮಾಡಿ ಎಚ್ಚರಿಕೆಯ ಗಂಟೆ ಭಾರಿಸಿದ್ದಾರೆ.

ಈ ವೇಳೆ ಈಶ್ವರ ಫೋಟೋ ಸ್ಟುಡಿಯೋ ಮಾಲೀಕ ಅಂಬಾಸಾ  ಮಾತನಾಡಿ, ನಗರದ ಬಸ್ ನಿಲ್ದಾಣಕ್ಕೆ ಬೇರೆ ಬೇರೆ ನಗರದಿಂದ ಬರುವ ಪ್ರಯಾಣಿಕರು ಎಲ್ಲೆಂದರಲ್ಲಿ ಉಗುಳುವುದು ನೋಡಿ ಗೋಡೆಗಳಿಗೆ ಬಣ್ಣದ  ಅವಶ್ಯಕತೆ ಇರುವುದಿಲ್ಲ. ಆ ಮಟ್ಟದಲ್ಲಿ ಉಗಿಯುತ್ತಿರುವುದು ಕಾಣಬಹುದಾಗಿದೆ. ಜೊತೆಗೆ ತಮಗೆ ಬೇಡವಾದ ವಸ್ತುಗಳನ್ನು ಕಸದ ಬುಟ್ಟಿಯಲ್ಲಿ ಹಾಕದೇ ನಿಂತ ಜಾಗದಲ್ಲೇ ಹಾಕಿ ಹೋಗುತ್ತಾರೆ. 

ಇದರಿಂದಾಗಿ ನಿಲ್ದಾಣ ಗಬ್ಬೆದ್ದು ನಾರುವಂತಹ ಪರಿಸ್ಥಿತಿ ಇರೋದಕ್ಕೆ ಇಲ್ಲಿನ ಪೊಲೀಸ್ ಸಿಬ್ಬಂದಿಗಳು ದಂಡವನ್ನು ಹಾಕಲಿಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಇದರಿಂದ ಬಸ್ ನಿಲ್ದಾಣ ಸ್ವಚ್ಚವಾಗಿ ಇರುವುದಕ್ಕೆ ಸಹಕಾರಿಯಾಗುತ್ತದೆ  ಎಂದು ಹೇಳಿದರು.

error: Content is protected !!