ಹರಿಹರ,ಮೇ 22- ನಗರದ ಕವಲೆತ್ತು ಗ್ರಾಮದ ಹತ್ತಿರ ತುಂಗಭದ್ರಾ ನದಿಯ ನೀರನ್ನು ಕುಡಿಯುವ ನೀರು ಸರಬರಾಜು ಯೋಜನೆಯಡಿ ಪೂರೈಸಲಾಗುತ್ತಿದ್ದು, ಜಾಕ್‍ವೆಲ್‍ಗೆ ಮಳೆಯ ನೀರು 24/7 ನಿರಂತರ ಹರಿಯುತ್ತಿದೆ. ಹಾಗಾಗಿ ಸಾರ್ವಜನಿಕರು ಕಡ್ಡಾಯವಾಗಿ ಈ ನೀರನ್ನು ಕುದಿಸಿ-ಆರಿಸಿ ಕುಡಿಯಬೇಕು ಹಾಗೂ ನೀರನ್ನು ವ್ಯರ್ಥ ಮಾಡದೇ ಮಿತವಾಗಿ ಬಳಸ ಬೇಕೆಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
January 9, 2025