ಶ್ರೀ ಪುರಿ ಜಗನ್ನಾಥ ರಥದ ಮಾದರಿಯಲ್ಲಿ ನೂತನ ರಥ ನಿರ್ಮಾಣ : ಸಹಕಾರಕ್ಕೆ ಕರೆ

ದಾವಣಗೆರೆ, ಮೇ 22- ಶ್ರೀ ಪುರಿ ಜಗನ್ನಾಥ ರಥದ ಮಾದರಿಯಲ್ಲಿಯೇ ದಾವಣಗೆರೆಯಲ್ಲೂ ನೂತನ ರಥ ನಿರ್ಮಿಸಲು ಉದ್ದೇಶಿಸಲಾಗಿದ್ದು, ಶ್ರೀ ಜಗನ್ನಾಥ ಪುರಿ ಸಂಪ್ರದಾಯದಂತೆ ಅಕ್ಷಯ ತೃತಿಯಾ ದಿನ ಸಂಕಲ್ಪ  ಮಾಡಲಾಗಿದೆ ಎಂದು ದಾವಣಗೆರೆ ಇಸ್ಕಾನ್ ಮುಖ್ಯಸ್ಥ ಅವಧೂತ ಚಂದ್ರದಾಸ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ರಥಕ್ಕೆ ಸುಮಾರು 15 ಲಕ್ಷ ರೂ. ವೆಚ್ಚವಾಗಲಿದ್ದು, ಭಕ್ತರು ಸಹಕಾರ ನೀಡಿ ಜಗನ್ನಾಥನ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಕೋರಿದ್ದಾರೆ.

ಕಳೆದ ಎರಡು ವರ್ಷಗಳಿಂದ ದಾವಣಗೆರೆಯಲ್ಲಿ ಶ್ರೀ ಜಗನ್ನಾಥ ರಥಯಾತ್ರೆ ನಡೆಸಲಾಗುತ್ತಿದ್ದು, ಈ ವೇಳೆ ಬೇರೆ ಊರಿನ ಇಸ್ಕಾನ್ ದೇವಸ್ಥಾನದಿಂದ ರಥ ತರಿಸಲಾಗುತ್ತಿತ್ತು. ಆದರೆ, ಈ ಬಾರಿ ದಾವಣಗೆರೆ ಯಲ್ಲಿಯೇ ನೂತನ ರಥ ನಿರ್ಮಿಸಲು ಉದ್ದೇಶಿಸ ಲಾಗಿದೆ. ಭಕ್ತರು ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ 017601002964, ಖಾತೆ ಹೆಸರು-ISKCON – LAND BUILDING AND CONS FUND, IFSC CODE-ICIC0000176, UPI ID-KSKCONLANDBUILDINGAND CONSFUND.9421224448.ibzl@icici ಮೂಲಕ ದೇಣಿಗೆ ಸಲ್ಲಿಸಬಹುದಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್, ಕೆ.ಬಿ. ಶಂಕರನಾರಾಯಣ, ನಲ್ಲೂರು ರಾಜಕುಮಾರ್, ಬಿ. ಸತ್ಯನಾರಾಯಣ ಮೂರ್ತಿ ಇತರರಿದ್ದರು.

error: Content is protected !!