ಡಿ.ಆರ್.ಎಂ. ವಿಜ್ಞಾನ ಕಾಲೇಜು ವತಿಯಿಂದ ಬುದ್ಧ ಪೂರ್ಣಿಮೆ ಅಂಗವಾಗಿ ಇಂದು ಬೆಳಿಗ್ಗೆ 10 ಗಂಟೆಗೆ ಜ್ಞಾನ ಜ್ಯೋತಿ ಕಾರ್ಯಕ್ರಮವನ್ನು ಎ.ಆರ್.ಜಿ. ಕಾಲೇಜಿನ ಎಸ್.ಎಸ್. ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾಲೇಜಿನ ಪ್ರಾಂಶುಪಾಲರಾದ ಎಂ.ಪಿ. ರೂಪಶ್ರೀ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಮಾಜಿ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಪಾಲ್ಗೊಳ್ಳಲಿದ್ದಾರೆ. ಐಕ್ಯೂಎಸಿ ಸಂಯೋಜಕ ಎಲ್.ಎಸ್.ಡಾ. ರೋಹಿತ್, ಸಂಚಾಲಕ ಡಾ. ಮಹಮ್ಮದ್ ಇಮಾದದುಲ್ಲಾ ಉಪಸ್ಥಿತರಿರುವರು.