ನಿ. ಡಿವೈಎಸ್ಪಿ ನಾಗರಾಜ್‌ರಿಂದ ಹೂವಿನ ಕರಗ ನೃತ್ಯ ಪ್ರದರ್ಶನ

ನಿ. ಡಿವೈಎಸ್ಪಿ ನಾಗರಾಜ್‌ರಿಂದ ಹೂವಿನ ಕರಗ ನೃತ್ಯ ಪ್ರದರ್ಶನ

ನಿ. ಡಿವೈಎಸ್ಪಿ ನಾಗರಾಜ್‌ರಿಂದ ಹೂವಿನ ಕರಗ ನೃತ್ಯ ಪ್ರದರ್ಶನ - Janathavaniಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲ್ಲೂಕಿನ ದೊಡ್ಡ ತುಮಕೂರು ಗ್ರಾಮದೇವತೆ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವ ನಾಳೆ ದಿನಾಂಕ 23 ಮತ್ತು 24ರಂದು ನಡೆಯಲಿದೆ.

ನಾಳೆ ದಿನಾಂಕ 23 ರ ಗುರುವಾರ ರಾತ್ರಿ 10.25 ರಿಂದ ಮಧ್ಯ ರಾತ್ರಿ 12.30ರ ವರೆಗೆ ಸಲ್ಲುವ ಶುಭ ಲಗ್ನದಲ್ಲಿ ಹೂವಿನ ಕರಗ ಮಹೋತ್ಸವ ಆಯೋಜನೆಗೊಂಡಿದೆ.

ಮೂಲತಃ ದೊಡ್ಡ ತುಮಕೂರಿನವರೇ ಆದ ನಿವೃತ್ತ ಪೊಲೀಸ್  ಡಿವೈಎಸ್ಪಿ  ರಾ. ನಾಗರಾಜ್‌ ಅವರು ವಿಶಿಷ್ಟ ನರ್ತನದೊಂದಿಗೆ ಶ್ರೀದೇವಿಯ ಹೂವಿನ ಕರಗವನ್ನು ಹೊರಲಿದ್ದಾರೆ.

ನಾಗರಾಜ್ ಅವರು ಸುಮಾರು 48 ವರ್ಷಗಳಿಂದ ಶ್ರೀ ದೇವಿಯ ಆರಾಧಕರಾಗಿ ವ್ರತವನ್ನು ಆಚರಿಸಿಕೊಂಡು ಕರಗ ಹೊರುತ್ತಾ ಬಂದಿದ್ದಾರೆ.

ರಾ. ನಾಗರಾಜ್ ಎಂದೇ ಗುರುತಿಸಿಕೊಂಡಿ ರುವ ಆರ್. ನಾಗರಾಜ್ ಅವರು ದಾವಣಗೆರೆ ಜಿಲ್ಲೆಯ ಸುತ್ತ-ಮುತ್ತ ವಿವಿಧ ಭಾಗಗಳಲ್ಲಿ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ, 2014 ರಲ್ಲಿ ನಿವೃತ್ತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

error: Content is protected !!