ದಾವಣಗೆರೆ, ಮೇ 17 – ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಶೇ. 85 ರಷ್ಟು ಮತ್ತು ಅದಕ್ಕೂ ಹೆಚ್ಚು ಅಂಕ ಪಡೆದ ದೈವಜ್ಞ ಸಮಾಜ ಬಾಂಧವರ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ `ಶಾರದಾ ಪುರಸ್ಕಾರ-2024′ ರಾಜ್ಯ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್ ತಿಳಿಸಿದ್ದಾರೆ.
ವಿವರಕ್ಕೆ 9341969084, 8147263552 ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ನಿರ್ದೇಶಕ ನಲ್ಲೂರು ಲಕ್ಷ್ಮಣ್‍ರಾವ್ ರೇವಣಕರ್ ವಿನಂತಿಸಿದ್ದಾರೆ. ಅರ್ಜಿಯನ್ನು ಇದೇ ದಿನಾಂಕ 25ರೊಳಗೆ ಸಲ್ಲಿಸಬಹುದು.