ದಾವಣಗೆರೆ, ಮೇ 17 – 2023-24ನೇ ಸಾಲಿನ ಐಸಿಎಸ್‍ಇ ಹತ್ತನೇ ತರಗತಿಯಲ್ಲಿ ನಗರದ ನಗರದ ಯುರೋ ಸ್ಕೂಲ್ ಶೇ. 100 ರಷ್ಟು ಫಲಿತಾಂಶ ಪಡೆದಿದೆ. ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 8 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ, 15 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಶಾಲೆಯ ಅಧೀತ್ ಬಸವರಾಜ್ ಇಂಗ್ಲಿಷ್-2 ಮತ್ತು ಇತಿಹಾಸ ಪತ್ರಿಕೆಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿರುವುದಲ್ಲದೇ, 600ಕ್ಕೆ 587 ಅಂಕಗಳನ್ನು ಪಡೆಯುವುದರ ಮೂಲಕ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ದಾನೇಶ್ವರಿ ಪಿ. ಅಥಣಿ 575, ಮಾನ್ಯ ಪೂಜಾರ್ 571, ಇಶಾನ್ ಎಸ್. ರೇವಣ್‌ಕರ್ 555, ವಿ. ಪ್ರತೀಕ್ಷಾ 552, ಮನಸ್ವಿ ಎಮ್ 533, ನಷಿತಾ ಅತ್ಲೂರಿ 533, ಎಸ್.ಹೆಚ್. ಫಾರಿಯಾ ಶಿಫಾ 524 ಅಂಕಗಳನ್ನು ಪಡೆದಿದ್ದಾರೆ.
January 11, 2025