ದಾವಣಗೆರೆ, ಮೇ 17 – ಪ್ರಧಾನ ಮಂತ್ರಿ ಸಡಕ್ ಯೋಜನೆ ಹಂತ-3ರಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳ ಪರಿವೀಕ್ಷಣೆಗಾಗಿ ಇದೇ ದಿನಾಂಕ 21 ರಿಂದ 24 ರವರೆಗೆ ಪಂಜಾಬ್ ಚಂಡೀಗಡದ ರಾಷ್ಟ್ರೀಯ ಗುಣ ನಿಯಂತ್ರಣ ಮಾನಿಟರ್ ಕೇಂದ್ರದ ಕೆವಾಲ್ ಕ್ರಿಶನ್ ಗರ್ಗ್ ಇವರು ಜಿಲ್ಲೆಗೆ ಆಗಮಿಸಿ ಪರೀವಿಕ್ಷಣೆ ನಡೆಸಲಿದ್ದಾರೆ. ಸಾರ್ವಜನಿಕರು ಇವರನ್ನು ಇದೇ ದಿನಾಂಕ 24 ರಂದು ಹೋಟೆಲ್ ಸಾಯಿ ಇಂಟರ್ ನ್ಯಾಷನಲ್ನಲ್ಲಿ ಸಂಪರ್ಕಿಸಬಹುದು. ಮೊ.ಸಂ: 9872255100ನ್ನು ಕರೆ ಮಾಡಬಹುದೆಂದು ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
January 11, 2025