ಪುಷ್ಪ ಶಾಮನೂರು ಮಹಾಲಿಂಗಪ್ಪ ಸಿಬಿಎಸ್ಸಿ ಶಾಲೆಗೆ ಶೇ.100 ಫಲಿತಾಂಶ

ಪುಷ್ಪ ಶಾಮನೂರು ಮಹಾಲಿಂಗಪ್ಪ  ಸಿಬಿಎಸ್ಸಿ ಶಾಲೆಗೆ ಶೇ.100 ಫಲಿತಾಂಶ

ದಾವಣಗೆರೆ, ಮೇ 16 –  ನಗರದ ಶ್ರೀಮತಿ ಪುಷ್ಪ ಶಾಮನೂರು ಮಹಾಲಿಂಗಪ್ಪ ಸಿಬಿಎಸ್‍ಇ ಶಾಲೆಯ  2023-24ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಲಭಿಸಿದೆ.

ಶಾಲೆಯ ಒಟ್ಟು 113 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಅದರಲ್ಲಿ 20 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 65 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 16 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. 

ಪ್ರಾಂಜಲಿ ಸಿಂಗ್ 500 ಕ್ಕೆ 480 ಅಂಕ ಗಳಿಸಿ ಶಾಲೆಗೆ ಮೊದಲ ಸ್ಥಾನ (96%) ಗಳಿಸಿದ್ದಾರೆ. ಈ ವಿದ್ಯಾರ್ಥಿನಿಯು ವಿಜ್ಞಾನ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಅನನ್ಯ ವಿ.ಎಸ್. 474, ಕಿಶನ್ ಪಿ.ಕೆ. 466 ಅಂಕಗಳನ್ನು ಗಳಿಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲರು, ಬೋಧಕ ವರ್ಗದವರು ಮತ್ತು ಸಂಸ್ಥೆಯ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ. 

error: Content is protected !!