ಅಂಡರ್‍ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಕೆ ಭೂಗತ ಕೆಲಸಗಳಿಗೆ ಬೆಸ್ಕಾಂ ಅನುಮತಿ ಕಡ್ಡಾಯ

ದಾವಣಗೆರೆ, ಮೇ 15 – ಬೆಸ್ಕಾಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿನ ದಾವಣಗೆರೆ 66/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹಾದು ಬರುವ ಎಫ್-13 ತ್ರಿಶೂಲ್ ಮತ್ತು ಎಫ್-8 ಕೆ.ಟಿ.ಜೆ. 11 ಕೆ.ವಿ ವಿದ್ಯುತ್ ಮಾರ್ಗವನ್ನು ಓವರ್ ಹೆಡ್ ಮಾರ್ಗದಿಂದ ಭೂಗತ ಕೇಬಲ್ ಆಗಿ ಪರಿವರ್ತಿಸಿ, ಚಾಲನೆಗೊಳಿಸಲಾಗಿದೆ.

11 ಕೆ.ವಿ ಮಾರ್ಗಗಗಳ ಭೂಗತ ಕೇಬಲ್ ಹಾದು ಹೋಗಿರುವ ಸ್ಥಳದ ವಿವರಗಳು : ಲಾಯರ್‍ರಸ್ತೆ, ದೀಕ್ಷಿತ್‍ರಸ್ತೆ, ಬಿಲಾಲ್ ಕಾಂಪೌಂಡ್, ಪಿ.ಬಿ. ರಸ್ತೆಯ, ಗಾಂಧಿ ಸರ್ಕಲ್‌ನಿಂದ ಈರುಳ್ಳಿ ಮಾರ್ಕೆಟ್‌ವರೆಗೆ ನಾಯ್ಡು ಹೋಟೆಲ್ ಪ್ರೆಸ್ ಕ್ಲಬ್, ಹಳೇ ಜನತಾವಾಣಿ ಆಫೀಸ್, ರಾಘವೇಂದ್ರ ಸ್ವಾಮಿ ದೇವಸ್ಥಾನ, ಲಾಯರ್‍ ರಸ್ತೆ, ಕೆ.ಟಿ.ಜೆ ನಗರ 1 ರಿಂದ 17ನೇ ಕ್ರಾಸ್, ಡಾಂಗೆ ಪಾರ್ಕ್, ಭಗತ್‍ಸಿಂಗ್ ನಗರ, ಡಿ.ಸಿ.ಎಂ. ರಸ್ತೆ, ಕೆ.ಬಿ.ಬಡಾವಣೆ, ತ್ರಿಶೂಲ್ ಚಿತ್ರಮಂದಿರ ರಸ್ತೆ, ಕಾವೇರಮ್ಮ ಸ್ಕೂಲ್, ಸಿದ್ದಮ್ಮ ಪಾರ್ಕ್ ರಸ್ತೆ, ಶಿವಪ್ಪ ಸರ್ಕಲ್, ಮುರುಘಾ ರಾಜೇಂದ್ರ ಮಳಿಗೆ, ಹದಡಿರಸ್ತೆ, ಹಳೆ ಬೆಸ್ಕಾಂ ಆಫೀಸ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.

ಈ ಪ್ರದೇಶಗಳಲ್ಲಿ ಯಾವುದೇ ರೀತಿಯ ಭೂಗತ ಕೆಲಸಗಳನ್ನು ಕೈಗೊಳ್ಳುವವರು ಬೆಸ್ಕಾಂನಿಂದ ಕಡ್ಡಾಯವಾಗಿ ನಿರಾಕ್ಷೇಪಣಾ ಪತ್ರ ಪಡೆಯುವುದು ಅಗತ್ಯ ಮತ್ತು ಬೆಸ್ಕಾಂ ಕಚೇರಿಗೆ ಮುಂಚಿತವಾಗಿ ಮಾಹಿತಿ ನೀಡದೇ ಭೂಗತ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಬೆಸ್ಕಾಂ ಕಂಪನಿ ಅಥವಾ ಸಾರ್ವಜನಿಕರ ಆಸ್ತಿ ಅಥವಾ ಯಾವುದೇ ರೀತಿಯ ಪ್ರಾಣಹಾನಿ ತೊಂದರೆ, ನಷ್ಟ ಉಂಟಾದಲ್ಲಿ ಕೆಲಸ ನಿರ್ವಹಿಸಿದವರೇ ನೇರ ಜವಾಬ್ದಾರಿ ಆಗಿರುತ್ತಾರೆ. ಹಾಗೂ ನಷ್ಟವನ್ನು ಅವರೇ ಬರಿಸಬೇಕಾಗಿರುತ್ತದೆ. 

ಕೆಲಸ ನಿರ್ವಹಿಸುವ ಸಮಯದಲ್ಲಿ ಈ ಭೂಗತ ಕೇಬಲ್ ಹಾನಿಗೊಳಗಾಗಿ ವಿದ್ಯುತ್ ಅಡಚಣೆಯಾಗಿ ಅದರಿಂದ ಉಂಟಾಗುವ ಆರ್ಥಿಕ ನಷ್ಟವನ್ನೂ ಸಹ
ಕೆಲಸ ನಿರ್ವಹಿಸಿದವರೆ ಭರಿಸಬೇಕೆಂದು
ಬೆಸ್ಕಾಂ ಪ್ರಕಟಣೆ ತಿಳಿಸಿದೆ.

error: Content is protected !!