ದಾವಣಗೆರೆ, ಮೇ 15 – ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಪರಿಸರ ಸಂಘ ಇವರುಗಳ ವತಿಯಿಂದ ಭೂ ಸುಧಾರಣೆ ಹಾಗೂ ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜೂನ್ 8 ರಂದು ಕನ್ನಡ ಮತ್ತು ಇಂಗ್ಲಿಷ್- 1000 ಪದಗಳಿಗೆ ಮೀರದಂತೆ ಭೂಮಿ ಮತ್ತು ಮಣ್ಣಿನ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ಏರ್ಪಡಿಸ ಲಾಗಿದೆ. ಉತ್ತಮ ಪ್ರಬಂಧಗಳಿಗೆ ಸೂಕ್ತ ಬಹು ಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
ಭಾಗವಹಿಸುವ ವಿದ್ಯಾರ್ಥಿಗಳು ಅಕಾಡೆಮಿಯ ಇ-ಮೇಲ್ [email protected]ಗೆ ಹೆಸರು, ಮೊಬೈಲ್ ಸಂಖ್ಯೆ, ಶಾಲೆಯ ಹೆಸರು, ಪ್ರಬಂಧದ ಭಾಷೆ ಕನ್ನಡ, ಆಂಗ್ಲ ಭಾಷೆಯಲ್ಲಿ ಬರೆದು ಪೋಸ್ಟ್ ಮೂಲಕ ಮೇ 27 ರೊಳಗಾಗಿ ಕಚೇರಿ ಕಳುಹಿಸುವುದು. ಹೆಚ್ಚಿನ ಮಾಹಿತಿಗಾಗಿ ಮೊ.9008675123 ಸಂಪರ್ಕಿಸಲು ರಿಜಿಸ್ಟ್ರಾರ್ ಎ.ಎಂ.ರಮೇಶ್ ತಿಳಿಸಿದ್ದಾರೆ.