ಸೋಮೇಶ್ವರ ಶಾಲೆಗೆ ಶೇ.100 ಫಲಿತಾಂಶ

ಸೋಮೇಶ್ವರ ಶಾಲೆಗೆ ಶೇ.100 ಫಲಿತಾಂಶ

ದಾವಣಗೆರೆ, ಮೇ 13- ದಾವಣಗೆರೆ ತಾಲ್ಲೂಕು ಗೋಣಿವಾಡ ಗ್ರಾಮದಲ್ಲಿರುವ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯಕ್ಕೆ ಸಿಬಿಎಸ್ಇ ಪರೀಕ್ಷೆಯಲ್ಲಿ ಶೇ.100ರ ಫಲಿತಾಂಶ ಲಭಿಸಿದೆ.

ಪರೀಕ್ಷೆ ಎದುರಿಸಿದ 28 ವಿದ್ಯಾರ್ಥಿಗಳ ಪೈಕಿ 16 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 12 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಎಚ್‌.ಎಂ. ಪವನ್ 500ಕ್ಕೆ 478 ಅಂಕ ಗಳಿಸಿ, ಶಾಲೆಗೆ ಮೊದಲ ಸ್ಥಾನ ಗಳಿಸಿದ್ದಾರೆ. ಆರ್. ಎನ್. ತೇಜಸ್ 476 ಎಂ.ಎಚ್. ಭೂಮಿ 473, ವಿ. ರಕ್ಷಾ 471, ಡಿ. ರಚನಾ 469 ಅಂಕ ಗಳಿಸಿದ್ದಾರೆ.

error: Content is protected !!