ಶ್ರೀ ರೇವಣಸಿದ್ದೇಶ್ವರ ವಸತಿಯುತ ಶಾಲೆಗೆ ಶೇ.93.33 ರಷ್ಟು ಫಲಿತಾಂಶ

ಶ್ರೀ ರೇವಣಸಿದ್ದೇಶ್ವರ ವಸತಿಯುತ ಶಾಲೆಗೆ ಶೇ.93.33 ರಷ್ಟು ಫಲಿತಾಂಶ

ದಾವಣಗೆರೆ, ಮೇ 13 – ತಾಲ್ಲೂಕಿನ ಬಸಾ ಪುರ ಗ್ರಾಮದ ಶ್ರೀ ರೇವಣಸಿದ್ದೇಶ್ವರ ವಸತಿಯುತ ಶಾಲೆಗೆ 2023-24ನೇ ಸಾಲಿನಲ್ಲಿ ಶೇ. 93.33 ರಷ್ಟು ಫಲಿತಾಂಶ ಲಭಿಸಿದೆ. ಶ್ರೀ ರೇವಣಸಿದ್ದೇಶ್ವರ ವಸತಿಯಿತ ಶಾಲೆಯಲ್ಲಿ ಒಟ್ಟು 30 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, 28 ಮಕ್ಕಳು ತೇರ್ಗಡೆಯಾಗಿದ್ದಾರೆ. ಶಾಲೆಗೆ ಪ್ರಥಮ ವಿದ್ಯಾರ್ಥಿನಿ ಕಾವ್ಯ ಎಸ್‌. 91.52%, ದ್ವಿತೀಯ ಲಕ್ಷ್ಮಿ ಆರ್‌. 89.28%, ತೃತೀಯ ಅಮೂಲ್ಯ 88.64%,  4 ಮತ್ತು 5ನೇಯವರಾಗಿ ವಿನಯ್‌ನಾಯ್ಕ್‌ ಟಿ. 80.96% ಮತ್ತು ಸ್ನೇಹ ಕೆ. 80.64% ಅಂಕಗಳೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾರೆ. 

error: Content is protected !!