ಸರ್ಕಾರ ಬಿಡುಗಡೆ ಮಾಡಿರುವ ಬಾಕಿ ಬೆಳೆ ನಷ್ಟ ಪರಿಹಾರವು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಿಸ್ ಮ್ಯಾಚಿಂಗ್ ಸಮಸ್ಯೆಯಿಂದ ರೈತರ ಖಾತೆಗೆ ಹಣ ಜಮಾ ಆಗದೇ ಸಾವಿರಾರು ರೈತರು ಈ ಯೋಜನೆ ಯಿಂದ ವಂಚಿತರಾಗುತ್ತಿದ್ದು, ಜಿಲ್ಲಾಡಳಿತ ದಿವ್ಯ ನಿರ್ಲಕ್ಷ ವಹಿಸಿದೆ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ ಮತ್ತು ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ದೂರಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು
ಜಂಟಿ ಕೃಷಿ ನಿರ್ದೇಶಕರು ಕೂಡಲೇ ಮಧ್ಯ ಪ್ರವೇಶಿಸಿ ತಾಂತ್ರಿಕ ದೋಷ ಸರಿಪಡಿಸುವಂತೆ ಒತ್ತಾಯಿಸಿ, ಇಂದು ಬೆಳಿಗ್ಗೆ 10.30 ಕ್ಕೆ ಕೆ.ಇ.ಬಿ. ವಿನಾಯಕ ದೇವಸ್ಥಾನದ ಹತ್ತಿರ ರೈತರೆಲ್ಲರ ತುರ್ತುಸಭೆ ಕರೆಯಲಾಗಿದೆ.