ರಾಣೇಬೆನ್ನೂರು, ಮೇ 12- ನಗರದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.92.30 ರಷ್ಟು ಫಲಿತಾಂಶ ಬಂದಿದ್ದು, ವಿದ್ಯಾರ್ಥಿ ಕಿಶನ್ ಆರ್.ನಸಲ್ ವಾಯ್ಕರ್ – 613 (ಶೇ.98.08) ಅಂಕ ಪಡೆದು ರಾಣೇಬೆನ್ನೂರು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಮೊಹಮ್ಮದ್ ಆಫ್ರಿದ್ ಎಸ್.ಹಿರೇಬಿದರಿ – 580 (ಶೇ.92.80) ದ್ವಿತೀಯ ಸ್ಥಾನ ಹಾಗೂ ಸುಮನ್ ಹೆಬ್ಬಳ್ಳಿ – 577 (ಶೇ.92.32) ಅಂಕಗಳು ಪಡೆದು ತೃತೀಯ ಸ್ಥಾನ ಪಡೆದಿರುತ್ತಾರೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಆರ್.ಎಸ್.ರಂಗರೆಡ್ಡಿ ಅಭಿನಂದಿಸಿದ್ದಾರೆ.