ದಾವಣಗೆರೆ, ಮೇ 12 – ನಗರದ ಬಸವರಾಜ ಪೇಟೆಯಲ್ಲಿರುವ ಶ್ರೀ ಬಸವೇಶ್ವರ ಹಾಗೂ ಶ್ರೀ ವೀರೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿಯನ್ನು ಹಾಗೂ ಶ್ರೀ ವೀರೇಶ್ವರ ಶರಣರ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದರು.
ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ವಿಶ್ವಗುರು ಶ್ರೀ ಬಸವೇಶ್ವರ ಮತ್ತು ಮಹಾದಾಸೋಹಿ ಶ್ರೀ ವೀರೇಶ್ವರ ಶರಣರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಜೆ ಶ್ರೀ ಬಸವೇಶ್ವರ ಭಾವ ಚಿತ್ರದ ಮೆರವಣಿಗೆ ಬಸವರಾಜಪೇಟೆ, ಹುಬ್ಬಳ್ಳಿ ಚೌಡಪ್ಪನ ಗಲ್ಲಿಯಲ್ಲಿ ನಡೆಯಿತು.
ಮೆರವಣಿಗೆಯಲ್ಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಮಲ್ಲಪ್ಪ ಬಿರಾದಾರ್, ಉಪಾಧ್ಯಕ್ಷ ವೀರಪ್ಪ ಎಂ. ಬಾವಿ, ಪ್ರಭು ಕಲಬುರ್ಗಿ ಪ್ರಧಾನ ಕಾರ್ಯದರ್ಶಿ ಎಂ. ದೊಡ್ಡಪ್ಪ, ಪ್ರಕಾಶ್, ಅಕ್ಕಿ ಶರಣಪ್ಪ, ಮರವಂಜಿ ಮಹಾದೇವ್, ವೀರೇಶ್ ಮುರುಗಯ್ಯ, ಜಯಣ್ಣ, ಕುಂಟೋಜಿ ಚೆನ್ನಪ್ಪ, ಹನುಮಂತಪ್ಪ, ನಾಗೂರು ಸಂಗಪ್ಪ, ಶಂಕರಗೌಡ, ಮಹಾಂತೇಶ್ ಒಣರೊಟ್ಟಿ, ದಾನಪ್ಪ, ಸಿದ್ದಲಿಂಗೇಶ್ ಮತ್ತಿತರರು ಭಾಗವಹಿಸಿದ್ದರು.