ಹರಿಹರ, ಮೇ 8- ಜನಪದ ಕಲಾ ತಂಡ, ಸಹ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಹೊಸಪೇಟೆ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಪ್ರಯುಕ್ತ ನಾಡಿದ್ದು ದಿನಾಂಕ 10ರ ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಬಸವೇಶ್ವರ ಸ್ವಾಮಿಗೆ ಮತ್ತು ಉತ್ಸವ ಮೂರ್ತಿ ಬೆಳ್ಳಿ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ನಡೆಯುವುದು. ನಂತರ ಶ್ರೀ ಬಸವೇಶ್ವರ ಜಯಂತ್ಯೋತ್ಸವದ ಮೆರವಣಿಗೆಯು ಬೆಳಿಗ್ಗೆ 8.30 ರಿಂದ ವಿಜೃಂಭಣೆಯಿಂದ ಜರುಗಲಿದೆ. ಅಂದು ರೈತರು ಎತ್ತುಗಳನ್ನು ಉಳುವೆ ಮತ್ತು ಬಂಡಿಗೆ ಹೂಡಬಾರದು. ಎತ್ತುಗಳನ್ನು ಸಿಂಗರಿಸಿ, ಮೆರವಣಿಗೆಗೆ ತರಬೇಕು ಎಂದು ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಜೆ. ಮುರುಗೇಶ್, ಕಾರ್ಯದರ್ಶಿ ಎಂ.ಎಂ. ಶಾಂತವೀರಪ್ಪ ತಿಳಿಸಿದ್ದಾರೆ.
February 27, 2025