ದಾವಣಗೆರೆ, ಮೇ 7- ಶ್ರೀ ಶಂಕರ ಸೇವಾ ಸಂಘದಿಂದ ಇದೇ ದಿನಾಂಕ 11 ಮತ್ತು 12 ರಂದು ಶ್ರೀ ಶಂಕರ ಭಗವತ್ಪಾದರ ಜಯಂತಿಯನ್ನು ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 11ರ ಶನಿವಾರ ಬೆಳಗ್ಗೆ 8.30ಕ್ಕೆ ವಿದ್ವಾನ್ ಎಂ.ಎಸ್. ವಿನಾಯಕ ಅವರಿಂದ ಶಂಕರ ಭಾಷ್ಯ ಪಾರಾಯಣ, ಸಂಜೆ 6 ಗಂಟೆಗೆ ಉಪನ್ಯಾಸ ಕಾರ್ಯಕ್ರಮ, ವಿದ್ವಾನ್ ಎಂ.ಎಸ್. ವಿನಾಯಕ ಶಿವಮೊಗ್ಗ ಅವರಿಂದ `ಭಾರತಕ್ಕೆ ಶ್ರೀ ಶಂಕರರ ಕೊಡುಗೆ’ ಕುರಿತು ಉಪನ್ಯಾಸ ನಡೆಯಲಿದೆ.
ಸಂಜೆ 7.30ಕ್ಕೆ ಪಾಲಕಿ ಉತ್ಸವ ಹಾಗೂ ರಥೋತ್ಸವ ಜರುಗುವುದು.
ದಿನಾಂಕ 12ರ ಭಾನುವಾರ ಶ್ರೀ ಶಂಕರ ಭಗವತ್ಪಾದರ ಜಯಂತಿ ಅಂಗವಾಗಿ ಪಲ್ಲಕ್ಕಿ ಉತ್ಸವ ಬೆಳಗ್ಗೆ 9 ಗಂಟೆಗೆ ಶ್ರೀ ಶಾರದಾಂಬ ದೇವಸ್ಥಾನದಿಂದ ಪ್ರಾರಂಭವಾಗಲಿದೆ. ನಂತರ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಅನ್ನ ಸಂಪರ್ಪಣೆ.
5.30ಕ್ಕೆ ಶ್ರೀರಾಮ ಭಜನಾ ಮಂಡಳಿಯವರಿಂದ ಭಜನೆ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮವಿದೆ ಎಂದು ಸಂಘದ ಅಧ್ಯಕ್ಷ ಡಾ. ಬಿ.ಟಿ. ಅಚ್ಯುತ್ ಮತ್ತು ಕಾರ್ಯದರ್ಶಿ ಶ್ರೀನಿವಾಸ್ ಜೋಶಿ ತಿಳಿಸಿದ್ದಾರೆ.