ದಾವಣಗೆರೆ, ಮೇ 7- ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿನ 4236 ಮತದಾರರಲ್ಲಿ 2496 ಪುರುಷರಲ್ಲಿ 2495 ಮತದಾನ ಮಾಡಿದ್ದು, ಒಬ್ಬರು ಪ್ಯಾರಾಲಿಸಿಸ್ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಮತದಾನ ಮಾಡಲು ಸಾಧ್ಯವಾಗಿಲ್ಲ.
1749 ಮಹಿಳೆಯರಲ್ಲಿ 1739 ಜನರು ಮತದಾನ ಮಾಡಿದ್ದು ಒಬ್ಬರು ಮೃತರಾಗಿರು ತ್ತಾರೆ. ಈ ಕ್ಷೇತ್ರದಲ್ಲಿ ಬಹುತೇಕ ಶೇ. 100 ರಷ್ಟು ವಿಶೇಷಚೇತನರಿಂದ ಮತದಾನವಾ ದಂತಾಗಿದೆ ಎಂದು ಸಿಇಓ ಹಾಗೂ ಸ್ವೀಪ್ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ಅವರು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.