ದಾವಣಗೆರೆ, ಮೇ 6 – ಇಲ್ಲಿನ ಗಾಂಧಿ ನಗರದಲ್ಲಿ ನಾಡಿದ್ದು ದಿನಾಂಕ 8ರಿಂದ 10ರ ವರೆಗೆ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ. 8ರ ಬೆಳಗ್ಗೆ 6ಕ್ಕೆ ಹರಿಹರದ ತುಂಗಭದ್ರಾ ನದಿಗೆ ದೇವಿಯು ಹೊಳೆ ಪೂಜೆಗೆ ಹೋಗಲಿದ್ದು, ಅಂದು ಸಂಜೆ 6ಕ್ಕೆ ದೇವಿಯ ಮೆರವಣಿಗೆ ನಡೆಯಲಿದೆ. ಇದೇ ದಿನಾಂಕ 9ರಂದು ರಾತ್ರಿ 10ಕ್ಕೆ ಭಜನೆ ಮತ್ತು ದಿನಾಂಕ 10ರ ಬೆಳಗ್ಗೆ 6ಕ್ಕೆ ದೇವಿಯ ಅಗ್ನಿಕುಂಡ ಜರುಗಿದ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸೇವಾ ಸಮಿತಿ ತಿಳಿಸಿದೆ.
ಗಾಂಧಿನಗರದಲ್ಲಿ ನಾಳೆಯಿಂದ ಜಾತ್ರೆ
