ಹರಿಹರ, ಮೇ 5 – ಲೋಕಸಭೆ ಚುನಾವಣೆ ಯಲ್ಲಿ ಹಣ, ಆಮಿಷವೊಡ್ಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ಜನರು ಸ್ವಾಭಿಮಾನಿಗಳಾಗಿದ್ದು, ಸ್ವಾಭಿಮಾನಕ್ಕೆ ಮತ ಹಾಕಿ ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಮನವಿ ಮಾಡಿದರು.
ಬೆಳ್ಳೂಡಿ ಗ್ರಾಮದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ವಿನಯ್ ಕುಮಾರ್ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು. ಈ ವೇಳೆ ಗ್ರಾಮದ ಭರಮಪ್ಪ, ರೇವಣಸಿದ್ದಪ್ಪ, ಭೀಮಪ್ಪ, ಕುಬೇಂದ್ರ, ಚಂದ್ರು, ಸಿದ್ಧಪ್ಪ, ರಾಮಪ್ಪ, ಬೀರಪ್ಪ, ಸಿದ್ದೇಶ, ಪ್ರಭು ಮತ್ತಿತರರು ಹಾಜರಿದ್ದರು.
ರಾಜನಹಳ್ಳಿ ಗ್ರಾಮದ ಮುಖಂಡರಾದ ಸಂತೋಷ, ಗೋವಿಂದ, ಹುಲಿಗೇಶ, ಹನುಮಂತ, ಮನು, ಪರಶುರಾಮ್, ಪ್ರಶಾಂತ, ಹನುಮಂತ ಮತ್ತಿತರರು ಹಾಜರಿದ್ದರು.
ಜಿಗಳಿ ಹಾಗೂ ಕುಣಿಬೆಳಕೆರೆ ಗ್ರಾಮದಲ್ಲಿ ವಿನಯ್ ಕುಮಾರ್ ಮತ ಯಾಚಿಸಿದರು.
ಈ ವೇಳೆ ಜಿಗಳಿ ಗ್ರಾಮದ
ಮುಖಂಡರಾದ ದೇವೇಂದ್ರಪ್ಪ ಪೂಜಾರು, ಹನುಮಂತಪ್ಪ ಹುಳ್ಳೇರ, ಶಿವಪ್ಪ ಎಕ್ಕೆಗೊಂದಿ, ರಂಗನಾಥ ಪೂಜಾರ, ಕೆಂಚಪ್ಪ ಪೂಜಾರ, ಮಧು ತಿಮ್ಮನಕಟ್ಟೆ, ರಾಜಣ್ಣ, ಕುಬೇರಗೌಡ ಹಾಗೂ ಕುಣಿಬೆಳಕೆರೆ ಗ್ರಾಮದ ವಿಜಯ್, ರೇವಣಸಿದ್ದೇಶ, ಬೀರೇಶ, ಚಂದ್ರಪ್ಪ, ಮಲ್ಲಣ್ಣ, ಮಧು, ಶಿವು, ಅಶೋಕ, ಚಂದ್ರ, ವಿಜಯಪ್ಪ, ಶಿವಣ್ಣ, ಬಸವರಾಜಪ್ಪ, ಹುಲ್ಲುಮನೆ ಚಿಕ್ಕಪ್ಪ, ಬಸಣ್ಣ ಮತ್ತಿತರರು ಹಾಜರಿದ್ದರು.