ಹರಿಹರ, ಮೇ 2- ಮೇ 7 ರಂದು ನಡೆಯುವ ದಾವ ಣಗೆರೆ ಲೋಕಸಭಾ ಚುನಾವಣೆ ಅಂಗವಾಗಿ ಕಾಂಗ್ರೆಸ್ ಪಕ್ಷದ ಕುರುಬ ಸಮಾಜದ ಬೆಂಬಲಿತ ಸಭೆಯನ್ನು ನಾಳೆ ದಿನಾಂಕ 4ರ ಶನಿವಾರ ಮಧ್ಯಾಹ್ನ 12 ಗಂಟೆಗೆ ದಾವಣಗೆರ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕುರುಬ ಸಮಾಜದ ಮುಖಂಡ, ವಕೀಲ ಲೋಕಿಕೆರೆ ಸಿದ್ದಪ್ಪ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿದ್ದು ದಿನಾಂಕ 4 ರ ಶನಿವಾರ ಮಧ್ಯಾಹ್ನ 12 ಗಂಟೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರವಾಗಿ ಚುನಾವಣೆ ಪ್ರಚಾರಕ್ಕೆ ಆಗಮಿಸಲಿದ್ದು, ಅವರು ಪ್ರಚಾರ ಕಾರ್ಯದಲ್ಲಿ ಭಾಗವಹಿಸುವುದಕ್ಕಿಂತ ಮುಂಚಿತವಾಗಿ ದಾವಣಗೆರೆ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ಕುರುಬ ಸಮಾಜದವರ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.
ಸಭೆಯಲ್ಲಿ ಸಮಾಜದ ಮುಖಂಡರಾದ ಹೆಚ್.ಎಂ.ರೇವಣ್ಣ, ಮಾಜಿ ಶಾಸಕ ಎಸ್.ರಾಮಪ್ಪ, ಶಿವಕು ಮಾರ್ ಒಡೆಯರ್ ಸೇರಿದಂತೆ ಹಲವಾರು ಕುರುಬ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರಾದ ಮಾಜಿ ಶಾಸಕ ಎಸ್.ರಾಮಪ್ಪ, ಶಿವಕುಮಾರ್ ಒಡೆಯರ್, ಬಿ.ರೇವಣಸಿದ್ದಪ್ಪ, ಕೆ.ಜಡಿಯಪ್ಪ, ಸುರೇಶ್ ಹಾದಿಮನಿ, ಸಿ.ಎನ್.ಹುಲಗೇಶ್, ಜೆ.ಸಿ.ನಿಂಗಪ್ಪ, ಡಿ.ದಿಳ್ಳೆಪ್ಪ, ಗೋಣ್ಯಪ್ಪ, ನಾಗರಾಜ್ ಜಂಬನಹಳ್ಳಿ, ಶಿವಣ್ಣ, ಗಿರೀಶ್ ಒಡೆಯರ್, ಎಸ್. ಎನ್.ಆನಂದಪ್ಪ, ಚಂದ್ರಶೇಖರ್ ಒಡೆಯರ್ ಹಾಗೂ ಇತರರು ಹಾಜರಿದ್ದರು.