ಭಾರತೀಯ ಭೂಸೇನೆ ಯಲ್ಲಿ ಸೈನಿಕರಾಗಿ 17 ವರ್ಷಗಳ ಕಾಲ ದೇಶ ರಕ್ಷಣೆ ಮಾಡಿ, ನಿವೃತ್ತರಾಗಿರುವ ಹರಿಹರ ತಾಲ್ಲೂಕು ಹರಳಹಳ್ಳಿಯ ಹನಮಂತಪ್ಪ ಡಿ.ಹೆಚ್. ಅವರು ಇಂದು ತಮ್ಮ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ.
ಮಧ್ಯಾಹ್ನ 3 ಕ್ಕೆ ಹರಳಹಳ್ಳಿ ಗ್ರಾಮಸ್ಥರಿಂದ ಮಲೇಬೆನ್ನೂರು ಸರ್ಕಾರಿ ಆಸ್ಪತ್ರೆಯಿಂದ ಪಿ.ಡಬ್ಲ್ಯೂಡಿ ಕಛೇರಿವರೆಗೂ ಹಾಗೂ ಹರಳ ಹಳ್ಳಿ ಬಸ್ ನಿಲ್ದಾಣದಿಂದ ಶ್ರೀ ಆಂಜನೇಯ ದೇವಸ್ಥಾನದವ ರೆಗೂ ಮೆರವಣಿಗೆ ಮೂಲಕ ಸ್ವಾಗತಿಸಲಾಗುತ್ತದೆ. ನಂತರ ಸಂಜೆ 5ಕ್ಕೆ ಹರಳಹಳ್ಳಿ ಗ್ರಾಮಸ್ಥ ರಿಂದ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯುವುದು.