ಪೆನ್ಡ್ರೈವ್ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ : ಶಾಸಕ ಯತ್ನಾಳ್
ದಾವಣಗೆರೆ, ಮೇ 1 – ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿ ಆಗುವವರೆಗೂ ರಾಜ್ಯ ಸರ್ಕಾರ ಮಲಗಿಕೊಂಡಿತ್ತಾ? ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಪ್ರಶ್ನಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪಿ.ಎಸ್.ಐ. ಹಗರಣ ಹಾಗೂ ಸಿನಿಮಾ ನಟಿಯರಿಗೆ ಸಂಬಂಧಿಸಿದ ಮಾದಕ ಪ್ರಕರಣಗಳನ್ನು ಮುಚ್ಚಿ ಹಾಕುವ ಯತ್ನ ನಡೆಸಲಾಗಿತ್ತು. ಅದೇ ರೀತಿ ಪೆನ್ಡ್ರೈವ್ ಪ್ರಕರಣವನ್ನು ಅಡ್ಜಸ್ಟ್ಮೆಂಟ್ ರಾಜಕಾರಣದ ಮೂಲಕ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಿ.ಡಿ. ಉತ್ಪಾದನೆ ಮಾಡುವ ಎರಡು ಕಾರ್ಖಾನೆಗಳಿವೆ. ಈ ಎರಡು ಕಾರ್ಖಾನೆ ಗಳಿಂದ ರಾಜ್ಯದ ರಾಜಕಾರ ಣವೇ ಹಾಳಾಗುತ್ತಿದೆ. ಅದರಲ್ಲೊಂದರ ಹೆಸರನ್ನು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಈಗಾ ಗಲೇ ಬಹಿರಂಗ ಪಡಿಸಿದ್ದಾರೆ ಎಂದೂ ಅವರು ಹೇಳಿದರು. ಇಷ್ಟು ದಿನ ಕಾಂಗ್ರೆಸ್ಗೆ ಮತ ಹಾಕಲು ಹೇಳುತ್ತಿದ್ದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾ ನಂದ ಸ್ವಾಮೀಜಿ ಈಗ ತಾವೇ ಪ್ರಹ್ಲಾದ್ ಜೋಷಿ ಅವರಿಗೆ ಕರೆ ಮಾಡಿ ಆಶೀರ್ವಾದ ಪಡೆಯಲು ಬರುವಂತೆ ಕೇಳಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ವಾಮೀಜಿ ಹೆಸರು ಹೇಳದೆಯೇ ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಗಾಳಿ ಚೆನ್ನಾಗಿದೆ. ಬಿಜೆಪಿ 25 ಸೀಟುಗಳಲ್ಲಿ ಗೆಲ್ಲಲಿದೆ. ಹೀಗಾಗಿ ನನ್ನ ಮಾನ ಹರಾಜಾಗುತ್ತದೆ ಎಂಬ ಅರಿವಾಗಿ ಸ್ವಾಮೀಜಿ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಸ್ವಾಮೀಜಿಗಳಿಗೆ ರಾಜಕಾರಣದಲ್ಲಿ ಏನು ಕೆಲಸ? ಇವರೆಲ್ಲ ಹಗರಣದ ಸ್ವಾಮಿಗಳು. ತುಂಗಾರತಿ ಹೆಸ ರಿನಲ್ಲಿ ಹಣ ಮಾಡಿದ್ದಾರೆ ಎಂದೂ ಆರೋಪಿಸಿದರು.