ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರವಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಇಂದು ರೋಡ್ ಷೋ ಮೂಲಕ ಮತಯಾಚಿಸುವರು.
ಇಂದು ಸಂಜೆ 4-30ಕ್ಕೆ ಹಾಸಬಾವಿ ಸರ್ಕಲ್ ನಿಂದ ಆರಂಭವಾಗುವ ಈ ರೋಡ್ ಷೋ, ಮದೀನಾ ಸರ್ಕಲ್, ಅಖ್ತರ್ ರಜಾ ಸರ್ಕಲ್, ಎಸ್.ಎಸ್.ಮಲ್ಲಿಕಾರ್ಜುನ ನಗರದ ಮೂಲಕ ಕ್ರೀಡಾಂಗಣದವರೆಗೂ ನಡೆಯಲಿದೆ.
ಈ ರೋಡ್ ಷೋನಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮುಖಂಡರುಗಳಾದ ಸಾಧಿಕ್ ಪೈಲ್ವಾನ್, ಸೈಯದ್ ಸೈಪುಲ್ಲಾ, ತಂಜೀ ಸಮಿತಿ ಅಧ್ಯಕ್ಷ ದಾದುಸೇಠ್, ಬುತ್ತಿ ಗಫೂರ್ ಸಾಬ್, ಸಿ.ಕೆ.ಮುಸ್ತಾಕ್, ಎಸ್.ಕೆ.ಅಮ್ಜದ್, ಎ.ಬಿ.ಹಬೀಬ್ ಸಾಬ್, ಷಾ ನವಾಜ್ ಖಾನ್, ಮನ್ಸೂರ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಕೆ.ಚಮನ್ ಸಾಬ್, ಸೈಯದ್ ಚಾರ್ಲಿ, ಹುರ್ ಬಾನು ಪಂಡಿತ್, ಜಾಕೀರ್ ಅಲಿ, ಕಬೀರ್ ಖಾನ್, ಎ.ಬಿ.ರಹೀಂ, ಅಯ್ಯಪ್ಪ ದಾದು, ಸೌಮ್ಯ ನರೇಂದ್ರ, ಮಾಜಿ ಸದಸ್ಯ ಪರಸಪ್ಪ, ಅಲ್ತಾಫ್ ಹುಸೇನ್, ಫಾರೂಕ್, ಮುನ್ನಾ ಪೈಲ್ವಾನ್, ಎನ್.ಕೆ.ಇಸ್ಮಾಯಿಲ್, ಲಾಲ್ ಆರೀಫ್, ಕೊಡಪಾನ ದಾದಾಪೀರ್ ಪಾಲ್ಗೊಳ್ಳುವರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ತಿಳಿಸಿದ್ದಾರೆ.