ದಾವಣಗೆರೆ, ಏ. 26 – ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ, ಸಾರ್ವತ್ರಿಕ ಲೋಕಸಭಾ ಚುನಾವಣೆ ಅಂಗವಾಗಿ ಬರುವ ಮೇ 1 ರಂದು ಸಂಜೆ 5 ಗಂಟೆಗೆ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಬಾಸ್ಕೆಟ್ ಬಾಲ್ ಗ್ರೌಂಡ್ನಲ್ಲಿ ಸಾಕು ಪ್ರಾಣಿಗಳ ರ್ಯಾಂಪ್ ವಾಕ್ ಆಯೋಜಿಸಲಾಗಿದೆ.
ಮತದಾನ ಜಾಗೃತಿ ಅಂಗವಾಗಿ ಏರ್ಪಡಿಸಿದ ಸಾಕು ಪ್ರಾಣಿಗಳ ರಾಂಪ್ ವಾಕ್ನಲ್ಲಿ ಭಾಗವಹಿಸುವ ಸಾಕು ಪ್ರಾಣಿ (ನಾಯಿ, ಬೆಕ್ಕು) ಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ಮತ್ತು ಜಂತು ನಾಶಕ ಔಷಧಿಗಳನ್ನು ವಿತರಣೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಿದ ನಗರ ಹಾಗೂ ಸುತ್ತಮುತ್ತಲಿನ ಸಾಕುಪ್ರಾಣಿ (ನಾಯಿ,ಬೆಕ್ಕು) ಗಳ ಮಾಲೀಕರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಚಂದ್ರಶೇಖರ್ ಎಸ್. ಸುಂಕದ ತಿಳಿಸಿದ್ದಾರೆ.