ಸಿಲಿಂಡರ್ ಗೆದ್ದೇ ಗೆಲ್ಲುತ್ತೆ : ವಿನಯ್‌ಕುಮಾರ್ ವಿಶ್ವಾಸ

ಸಿಲಿಂಡರ್ ಗೆದ್ದೇ ಗೆಲ್ಲುತ್ತೆ : ವಿನಯ್‌ಕುಮಾರ್ ವಿಶ್ವಾಸ

ದಾವಣಗೆರೆ, ಏ.23- ನನಗೆ ಗ್ಯಾಸ್ ಸಿಲಿಂಡರ್ ಅಧಿಕೃತವಾಗಿ ಸಿಕ್ಕಿದ್ದು, ಲೋಕಸಭೆ ಚುನಾವಣೆಯಲ್ಲಿ ಸಿಲಿಂಡರ್ ಗೆಲ್ಲುತ್ತದೆ. ಜನರು ಈಗಾಗಲೇ ನನ್ನನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. 

ನಗರದ ತಮ್ಮ ಗೃಹ ಕಚೇರಿಯಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನಗೆ ಮತ ನೀಡಿ ಗೆಲ್ಲಿಸಿದರೆ ಪ್ರಜಾಪ್ರಭುತ್ವದ ಗೆಲುವು ಆಗುತ್ತದೆ. ನ್ಯಾಯಸಮ್ಮತ, ಶಾಂತಿಯುತ, ಕಳಂಕ ರಹಿತ ಚುನಾವಣೆ ಎದುರಿಸೋಣ. ಆದ್ರೆ, ವಿನಾಕಾರಣ ತೇಜೋವಧೆ ಮಾಡುವುದು ಸರಿಯಲ್ಲ. ನಾಮಪತ್ರ ವಾಪಸ್ ದಿನ ಅಂತ್ಯವಾಗಿದೆ. ಈಗ ಅಧಿಕೃತವಾಗಿ ಕಣಕ್ಕಿಳಿದಿದ್ದೇನೆ. ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದುಕೊಂಡವರಿಗೆ ನಿರಾಸೆ ಆಗಿದೆ ಎಂದು ಹೇಳಿದರು. 

ಬೂತ್ ಮಟ್ಟದ ಏಜೆಂಟ್ ಗಳನ್ನು ಗುರುತಿಸಿದ್ದೇವೆ. ನಮ್ಮಲ್ಲಿ ಯಾವ ಮುಖಂಡರೂ ಇಲ್ಲ. ಹೊಸ ನಾಯಕರು ತಯಾರಾಗುತ್ತಿದ್ದಾರೆ. ಜವಾಬ್ದಾರಿ ಕೊಡಲು ಸಭೆ ನಡೆಸಿದ್ದೇವೆ. ಪ್ರತಿಯೊಂದು ಮನೆಗೂ ತೆರಳಿ ಗ್ಯಾಸ್ ಸಿಲಿಂಡರ್ ಗುರುತು ಸಿಕ್ಕಿ ದ್ದು, ಇದಕ್ಕೆ ಮತ ಚಲಾಯಿಸು ವಂತೆ ಜನರಿಗೆ ಮನದಟ್ಟು ಮಾಡಿ ಕೊಡಲಾಗುವುದು ಎಂದರು. 

ಬಿಜೆಪಿ, ಕಾಂಗ್ರೆಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಸಮಾಧಾನಿತರು ಇದ್ದು, ಅವರು ಬೆಂಬಲ ನೀಡುತ್ತಿದ್ದಾರೆ. ಬಿಜೆಪಿ ಯಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದುಕೊಂಡಿದ್ದೆವು. ಈಗ ಅಲ್ಲಿಯೂ ಶುರುವಾಗಿದೆ. ಕಾಂಗ್ರೆಸ್ ನಲ್ಲಿ ಒಂದೇ ಮನೆಗೆ ಮೂರು ಅಧಿಕಾರ ಇದೆ. ಒಬ್ಬರು ಸಚಿವರು, ಮತ್ತೊಬ್ಬರು ಶಾಸಕರು, ಮೂರನೆಯವರು ಸಂಸದರಾದರೆ ಕಷ್ಟ ಎಂಬ ಕಾರಣಕ್ಕೆ ಜನರು ಕಾಂಗ್ರೆಸ್ ಬೆಂಬಲಿಸುವುದಿಲ್ಲ. ಹಾಗಾಗಿ ಬಿಜೆಪಿ ಮತ್ತು ಜಿ. ಬಿ. ವಿನಯ್ ಕುಮಾರ್ ನಡುವೆ ಪೈಪೋಟಿ ನಡೆಯಲಿದೆ ಎಂದು ತಿಳಿಸಿದರು. 

ನಾನು ತಯಾರು ಮಾಡಿದ್ದ ಪಿಚ್ ಮೇಲೆ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಬ್ಯಾಟಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾನು ಕಳೆದ ಒಂದು ವರ್ಷದಿಂದ ಹಳ್ಳಿಗಳಿಗೆ ಹೋಗಿ ಬಂದಿದ್ದೇನೆ. ಇನ್ನು 50 ರಿಂದ 60 ಹಳ್ಳಿಗಳಿಗೆ ಹೋಗುತ್ತೇನೆ. ಜನರು ನಮ್ಮೂರಿಗೆ ಬನ್ನಿ ಎಂದು ಈಗಲೂ ಕರೆಯುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಈ ಗ್ರಾಮಗಳಿಗೆ ಹೋಗಿ ಪ್ರಚಾರ ಮಾಡುತ್ತೇನೆ. ಶೇ. 90 ರಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಒಂದು ಕ್ಷೇತ್ರದಲ್ಲಿ ಹತ್ತಿಪ್ಪತ್ತು ಹಳ್ಳಿಗಳಿಗೆ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಹೋಗುತ್ತಿದ್ದರೂ, ಜನರ ಬೆಂಬಲ ಮಾತ್ರ ನನಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಬಗ್ಗೆಯೇ ಈಗ ಎಲ್ಲರಿಗೂ ಕುತೂಹಲ. ನನ್ನ ಮೇಲೆ ಕಣ್ಣಿಟ್ಟಿರುವುದು ಒಳ್ಳೆಯ ಸೂಚನೆ. ನಾನು ಗೆಲ್ಲುತ್ತೇನೆ ಎಂದುಕೊಂಡು ಮಾರಿಕಣ್ಣು ಹೋರಿ ಮೇಲೆ ಎನ್ನೋ ಹಾಗೆ ನನ್ನ ಮೇಲಿದೆ. ಹುಷಾರಿರಲು ಪ್ರಯತ್ನಪಡುತ್ತಿದ್ದೇನೆ. ಎಲ್ಲೂ ತಪ್ಪಾಗದ ರೀತಿಯಲ್ಲಿ ನಡೆಯುತ್ತೇವೆ. ಚುನಾವಣಾ ಆಯೋಗದ ನಿಯಮದ ಪ್ರಕಾರ ಚುನಾವಣೆ ಎದುರಿಸುತ್ತೇನೆ. ಏನೂ ತೊಂದರೆ ಆಗಲ್ಲ ಎಂಬುದು ನನ್ನ ಭಾವನೆ ಎಂದರು.   

ಕಾಂಗ್ರೆಸ್, ಬಿಜೆಪಿ ಎಂದು ಹೋಗಬೇಡಿ. ಮೋದಿ ಅವರಿಗೆ ಒಂದು ಸ್ಥಾನ ಹೋದರೆ ನಷ್ಟ ಆಗಲ್ಲ, ಒಂದು ಸ್ಥಾನದಲ್ಲಿ ಕಾಂಗ್ರೆಸ್ ಸೋತರೂ ಏನೂ ಆಗಲ್ಲ. ಯಾವುದೇ ಒಂದು ಸಮುದಾಯ ಒಂದು ಪಕ್ಷಕ್ಕೆ ಅನಿವಾರ್ಯವಾಗಿ ಮತ ಹಾಕುತ್ತಿತ್ತು. ಈಗ ಬೇರೊಂದು ಅವಕಾಶ ಇದೆ. ಮುಕ್ತವಾಗಿ, ತತ್ವ, ಸಿದ್ಧಾಂತಕ್ಕೆ ಅಂಟಿಕೊಳ್ಳದೇ ವ್ಯಕ್ತಿ ನೋಡಿ, ಕೆಲಸ ಗಮನಿಸಿ ಮತ ನೀಡಿ. ವ್ಯಕ್ತಿ ನೋಡಿ  ವೋಟ್ ಮಾಡಿ ಎಂದು ಮನವಿ ಮಾಡಿದರು.

error: Content is protected !!