ಸೌಹಾರ್ದತೆಯ ಭಾರತದ ಉಳಿವಿಗಾಗಿ ಜಾತ್ಯತೀತ ಪಕ್ಷಕ್ಕೆ ಮತ ನೀಡಲು ಕರೆ

ದಾವಣಗೆರೆ, ಏ.21- ಸಂವಿಧಾನಿಕ ಭಾರತ, ಸಾಮರಸ್ಯ, ಸೌಹಾರ್ದತೆಯ ಭಾರತದ ಉಳುವಿಗಾಗಿ ಜಾತ್ಯತೀತ ಪಕ್ಷಕ್ಕೆ ಮತ ನೀಡುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ, ಕೇಂದ್ರ ಸರ್ಕಾರದ ಜನ ವಿರೋಧಿ ದೋರಣೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದರು.

ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರಿ ಧೋರಣೆ ನಡೆಸಲಾಗುತ್ತಿದೆ. ಇಂತಹ ಸರ್ಕಾರ ಇವರನ್ನು  ಸೋಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದ್ದು, ಜನರು ತಮ್ಮ ಹಕ್ಕನ್ನು ಜವಾಬ್ದಾರಿಯಿಂದ ಚಿಂತಿಸಿ ಚಲಾಯಿಸುವಂತೆ ಹೇಳಿದರು.

ವಕೀಲ ಅನಿಸ್ ಪಾಷಾ ಮಾತನಾಡಿ, ನಮಗೆ ಬೇಕಾಗಿರುವ ರಾಮರಾಜ್ಯ, ನೆಮ್ಮದಿಯ ಬದುಕು. ಆದ್ದ ರಿಂದ ಆದ್ಯತೆ ಮೇಲೆ ಮತ ಚಲಾಯಿಸಬೇಕು ಎಂದರು.

ಎಐಟಿಯುಸಿಯ ಆವರಗೆರೆ ಉಮೇಶ್, ಕರ್ನಾಟಕ ಶ್ರಮಿಕ ಶಿಕ್ತಿಯ ಸತೀಶ್, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಶಿವಕುಮಾರ್ ಮಾಡಾಳ್, ಪವಿತ್ರ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!