ನನ್ನ ಏಳಿಗೆ ಸಹಿಸದ ವಿರೋಧಿಗಳಿಂದ ತೇಜೋವಧೆ : ವಿನಯ್ ಕುಮಾರ್

ನನ್ನ ಏಳಿಗೆ ಸಹಿಸದ ವಿರೋಧಿಗಳಿಂದ ತೇಜೋವಧೆ : ವಿನಯ್ ಕುಮಾರ್

ದಾವಣಗೆರೆ,ಏ.21- ಜಿಲ್ಲೆಯಾದ್ಯಂತ ನನ್ನ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದ್ರೆ, ವಿರೋಧಿಗಳು ನನ್ನ ತೇಜೋವಧೆ ಮಾಡುವ ಮೂಲಕ ಸುಳ್ಳು ವದಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇಂಥದ್ದಕ್ಕೆ ಯಾರೂ ಕಿವಿಗೊಡಬೇಡಿ ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. 

ಫೋಟೋ ಎಡಿಟ್ ಮಾಡಿ ಜನರಿಗೆ ತಪ್ಪು ಸಂದೇಶ ನೀಡುವಂತೆ ಪೋಸ್ಟರ್ ಹರಿಬಿಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಹೊರ ಬರುವಾಗ ಬಿಜೆಪಿ ಮುಖಂಡರು ಮಾತನಾಡಿಸಿದರು. ಅದನ್ನೇ ಫೋಟೋ ತೆಗೆದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಾನು ಇದ್ದಾಗ ಪೊಲೀಸರು ಸೇರಿದಂತೆ ಹಲವರು ಇದ್ದರು. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುತ್ತೇನೆ. ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ‌.

ಎಷ್ಟೇ ನನ್ನ ವಿರುದ್ಧ ಪಿತೂರಿ ಮಾಡಿದರೂ ಜನರು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ವಿನಯ್ ಕುಮಾರ್ ಹೇಳಿದ್ದಾರೆ. ರಾಜಕೀಯ ವಿರೋಧಿಗಳು ನನ್ನ ಏಳಿಗೆ ಸಹಿಸಲು ಆಗದೇ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ. ಇದಕ್ಕೆ ಅಭಿಮಾನಿಗಳು, ಹಿತೈಷಿಗಳು, ಸ್ವಾಭಿಮಾನದ ಬೆಂಬಲಿಗರು ತಲೆಕೆಡಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. 

ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ, ಎಸ್. ಎ. ರವೀಂದ್ರನಾಥ್ ಅವರು ಶುಕ್ರ ವಾರ ಸಿದ್ದೇಶ್ವರ ಅವರು ನಾಮಪತ್ರ ಸಲ್ಲಿ ಸುವಾಗ ಬಂದಿದ್ದರು. ಆಗ ಸಹಜವಾಗಿಯೇ ಕುಶಲೋಪರಿ ವಿಚಾರಿಸಿದರು.  ಇದೊಂದು ಆಕಸ್ಮಿಕ ಭೇಟಿ. ಇದಕ್ಕೆ ಕಥೆ ಕಟ್ಟುವುದು ಸರಿಯಲ್ಲ ಎಂದು ವಿನಯ್ ಕುಮಾರ್ ಹೇಳಿದ್ದಾರೆ. 

ಕೋಟಿ ರೂಪಾಯಿ ಕೊಟ್ಟರೂ ಇಷ್ಟೊಂದು ಜನಪ್ರಿ ಯತೆ ಸಿಗುವುದಿಲ್ಲ. ಉಚಿತವಾಗಿ ಪ್ರಚಾರ ನೀಡಿದ್ದೀರಾ. ಜನರು ನನ್ನ ಮೇಲೆ ಪ್ರೀತಿ, ವಿಶ್ವಾಸ ತೋರಿದ್ದಾರೆ, ತೋರುತ್ತಲೇ ಇದ್ದಾರೆ. ಒಡೆದಾಳುವ ನೀತಿ ತೋರಿಸಬೇಡಿ. ನಿಮಗೇ ನಷ್ಟ ಎಂದು ವಿನಯ್ ಕುಮಾರ್ ತಿಳಿಸಿದ್ದಾರೆ. 

ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಜಿಲ್ಲಾಧಿಕಾರಿ ಕಚೇರಿಗೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲು ಹೋಗಿದ್ದೆ. 

ಈ ವೇಳೆ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ, ಮಾಜಿ ಸಚಿವ ರವೀಂದ್ರನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು. ಅವರೆಲ್ಲರೂ ಮಾತನಾಡಿಸಿದರು ಎಂದು ಅವರು ವಿವರಿಸಿದ್ದಾರೆ.

error: Content is protected !!