23ರಂದು ಸಿದ್ಧೇಶ್ವರ ದೇವರ ರಥೋತ್ಸವ

ರಾಣೇಬೆನ್ನೂರು, ಏ. 20 – ನಗರದ ಸಿದ್ಧೇಶ್ವರ ದೇವರ ರಥೋತ್ಸವದ ಅಂಗವಾಗಿ ಏ.21ರಿಂದ 24ರ ವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ. 

ಏ.21ರಂದು ಸಂಜೆ 6ಕ್ಕೆ ಕಂಕಣಧಾರಣೆ, ಏ.22ರಂದು ಸಂಜೆ 6ಕ್ಕೆ  ಹೂವಿನ ತೇರು, ಏ.23ರಂದು ಬೆಳಗ್ಗೆ 6ಕ್ಕೆ ಗುಗ್ಗಳ, ಸಂಜೆ 5ಕ್ಕೆ ಮಹಾರಥೋತ್ಸವ, ಏ.24ರಂದು ಸಂಜೆ ಓಕುಳಿ ಹಾಗೂ ಬೆಲ್ಲದ ಬಂಡಿ ಉತ್ಸವ ಜರುಗಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

error: Content is protected !!