ರಾಣೇಬೆನ್ನೂರು, ಏ.18- ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಖನ್ನೂರ ವಿದ್ಯಾನಿಕೇತನ ಕಾಲೇಜಿಗೆ ಶೇ.90.50 ಫಲಿತಾಂಶ ಬಂದಿದೆ.
ಕಾಲೇಜಿನಿಂದ ಒಟ್ಟು 126 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 31 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 61-ಪ್ರಥಮ ದರ್ಜೆ, 7-ದ್ವಿತೀಯ ದರ್ಜೆ ಮತ್ತು 6 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಪಿಸಿಎಂಬಿಯಲ್ಲಿ ಶ್ರೇಯಾ ಪಿ. ಗರಡಿಮನಿ ಶೇ.98.25 ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದರೇ, ವಾಣಿಜ್ಯ ವಿಭಾಗದಲ್ಲಿ ಆರ್.ಎಸ್. ಹರ್ಷಿತಾ 95.5% ಫಲಿತಾಂಶದೊಂದಿಗೆ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿದ್ದಾರೆ. ಎಸ್. ರಶ್ಮಿ ಅರ್ಕಾಚಾರಿ ಶೇ.96.5, ಪ್ರಕೃತಿ ಎನ್ ಮಜ್ಜಿಗಿ ಶೇ.95.7 ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.