ಕಂದಗಲ್ಲು : ನಾಡಿದ್ದು ರಥೋತ್ಸವ

ದಾವಣಗೆರೆ, ಏ. 14 – ತಾಲ್ಲೂಕಿನ ಕಂದಗಲ್ಲು ಗ್ರಾಮದಲ್ಲಿ ನಾಳೆ ದಿನಾಂಕ 15 ರಿಂದ 18ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀ ಆಂಜನೇಯ ಸ್ವಾಮಿಯ ನೂತನ ರಥ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿ ರಥದ ನೂತನ ಚಕ್ರಗಳ ಉದ್ಘಾಟನೆ, ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಹೆಬ್ಬಾಳು ಶ್ರೀ ರುದ್ರೇಶ್ವರ ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿವೆ.

ನಾಳೆ ದಿನಾಂಕ 15ರ ಸೋಮವಾರ ಮಧ್ಯಾಹ್ನ 3ಕ್ಕೆ ಹಾಲು ತುಪ್ಪದ ಚರಗ, ರಾತ್ರಿ 10ಕ್ಕೆ ಗ್ರಾಮದ ಸಕಲ ದೇವರುಗಳು ಗಂಗೆ ಪೂಜೆಗೆ ಹೋಗಲಿವೆ. 16ರ ಮಂಗಳವಾರ ಬೆಳಗಿನ ಜಾವ 2ಕ್ಕೆ ದೇವರುಗಳ ಗ್ರಾಮ ಪ್ರದಕ್ಷಿಣೆ, ನಂತರ ಬ್ರಾಹ್ಮೀ ಮುಹೂರ್ತದಲ್ಲಿ ರುದ್ರಾಭಿಷೇಕ, ಹೋಮ, ಶ್ರೀಗಳಿಂದ ಶ್ರೀ ಆಂಜನೇಯ ಸ್ವಾಮಿ ನೂತನ ರಥದ ಕಳಸಾರೋಹಣ, ಶ್ರೀ ವೀರಭದ್ರೇಶ್ವರ ಸ್ವಾಮಿ ನೂತನ ಕಲ್ಲಿನ ಚಕ್ರಗಳ ಹಾಗೂ ನೂತನ ಅಗ್ನಿಕೊಂಡದ ಉದ್ಘಾಟನೆ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಮಹಾದಾಸೋಹ, ಸಂಜೆ 7.30ಕ್ಕೆ ಉಚ್ಚಾಯ ರಥೋತ್ಸವ ನಡೆಯಲಿದೆ.

17ರ ಬುಧವಾರ ರಾಮ ನವಮಿಯಂದು ಬೆಳಿಗ್ಗೆ 10.30ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಕೆಂಡಾರ್ಚನೆ ನಡೆಯಲಿದೆ. 18ರ ಗುರುವಾರ ಸಂಜೆ 4ಕ್ಕೆ ಓಕಳಿ ನಂತರ ದೇವರುಗಳ ಪ್ರದಕ್ಷಿಣೆ ನಡೆಯಲಿದೆ.

error: Content is protected !!