ಮಲೇಬೆನ್ನೂರು, ಏ.14- ಸಮೀಪದ ಹೊಸಳ್ಳಿ ಶ್ರೀ ಮಹಾಯೋಗಿ ವೇಮನ ಸಂಸ್ಥಾನ ಮಠದ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.99.07 ರಷ್ಟು ಫಲಿತಾಂಶ ಲಭಿಸಿದೆ.
ವಿಜ್ಞಾನ ವಿಭಾಗದ 217 ವಿದ್ಯಾರ್ಥಿಗಳಿಗೆ ಅತ್ಯುನ್ನತ ಶ್ರೇಣಿಯಲ್ಲಿ 101 ವಿದ್ಯಾರ್ಥಿಗಳು ಹಾಗೂ ಉನ್ನತ ಶ್ರೇಣಿಯಲ್ಲಿ 141 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎಂ.ಜಿ.ಆಶಾ ಎಂಬ ವಿದ್ಯಾರ್ಥಿನಿ 600 ಕ್ಕೆ 584 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಎಂ.ಟಿ.ಸಂಗೀತ (578), ಎಂ.ರಮ್ಯಾ (576), ಮಂಜನಗೌಡ (575), ಸೂರ್ಯಕಲಾ (573), ವಿ.ಟಿ.ರಮ್ಯಾ (572) ಅಂಕಗಳನ್ನು ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 14 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 28 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೆರ್ಗಡೆಯಾಗಿದ್ದಾರೆ. ಎಸ್.ಅರ್ಪಿತಾ (567), ಜಿ.ತ್ರಿವೇಣಿ (567), ಆರ್.ಹೆಚ್.ಯಶ್ಪ್ರಿತ (559), ಎಂ.ಆರ್.ಲತಾ (553) ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದು ಕೊಟ್ಟಿದ್ದಾರೆ.
ಈ ವಿದ್ಯಾರ್ಥಿಗಳನ್ನು ಮಠದ ಗುರುಗಳಾದ ಶ್ರೀ ವೇಮನಾನಂದ ಸ್ವಾಮೀಜಿ ಮತ್ತು ಡಾ.ಬಸವಕುಮಾರ ಸ್ವಾಮೀಜಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಬಿ.ಎಂ.ಕುಂಜುರಾಣಿ ಹಾಗೂ ಉಪನ್ಯಾಸಕ ಮತ್ತು ಬೋಧಕೇತರ ವರ್ಗದವರು ಅಭಿನಂದಿಸಿದ್ದಾರೆ.