ನಾಳೆ ರಶ್ಮಿ ಶಾಲೆ ಪ್ರವೇಶಕ್ಕೆ ಸಂದರ್ಶನ

ದಾವಣಗೆರೆ, ಏ. 12- ಕುಂದುವಾಡ ಸಮೀಪದ ಡಾ. ಡಿ.ಪರ್ವತಪ್ಪ ಮೆಮೋರಿಯಲ್ ಟ್ರಸ್ಟ್‌ನ `ರಶ್ಮಿ’ ಹೆಣ್ಣು ಮಕ್ಕಳ ಉಚಿತ ವಸತಿಯುತ ಪ್ರಾಥಮಿಕ ಮತ್ತು ಪ್ರೌಢಶಾಲೆ (ಜಿಎಂಐಟಿ ಕಾಲೇಜು ಎದುರುಗಡೆ)ಯಲ್ಲಿ 1 ನೇ ತರಗತಿಯಿಂದ 9 ನೇ ತರಗತಿವರೆಗೆ ಓದ ಬಯಸುವ ಹೆಣ್ಣು ಮಕ್ಕಳಿಗೆ ಶಾಲಾ ಅವರಣ ದಲ್ಲಿ ನಾಡಿದ್ದು ದಿನಾಂಕ 14 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಸಂದರ್ಶನ ಏರ್ಪಡಿಸಲಾಗಿದೆ.

ಅನಾಥ, ಬಡ ಹೆಣ್ಣು ಮಕ್ಕ ಳಿಗೆ ಮಾತ್ರ ಪ್ರವೇಶಾವಕಾಶ ವಿದ್ದು, ಸೇರ ಬಯಸುವ ವಿದ್ಯಾರ್ಥಿನಿಯರು ಪಾಲಕರೊಂ ದಿಗೆ ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9916362288 ಕ್ಕೆ ಸಂಪರ್ಕಿಸುವಂತೆ ಶಾಲಾ ಮುಖ್ಯೋಪಾಧ್ಯಾಯರು ಮನವಿ ಮಾಡಿದ್ದಾರೆ.

error: Content is protected !!