ಹರಪನಹಳ್ಳಿ,ಏ.11- ಲೋಕಸಭೆ ಚುನಾವಣೆಯನ್ನು ಜನತಾದಳ (ಜಾತ್ಯತೀತ) ಮತ್ತು ಬಿಜೆಪಿ ಮೈತ್ರಿ ಸಹಭಾಗಿತ್ವದಲ್ಲಿ ನಡೆಸಲು ತಿರ್ಮಾನಿಸಿದ್ದು, ಹರಪನಹಳ್ಳಿ ತಾಲ್ಲೂಕಿನ ಜೆಡಿಎಸ್ ಮತ್ತು ಬಿಜೆಪಿ ಬಹಿರಂಗ ಮೈತ್ರಿ ಘೋಷಿಸುವ ಸಾಮಾನ್ಯ ಸಭೆಯನ್ನು ಪಟ್ಟಣದ ನಟರಾಜ ಕಲಾಭವನದಲ್ಲಿ ನಾಡಿದ್ದು ದಿನಾಂಕ 13ರ ಶನಿವಾರ ಕರೆಯಲಾಗಿದೆ.
ಸಭೆಗೆ ಮೈತ್ರಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಸಂಸದ ಜಿ.ಎಂ.ಸಿದ್ದೇಶ್ವರ, ಹಗರಿಬೊಮ್ಮನಹಳ್ಳಿ ಜೆಡಿಎಸ್ ಶಾಸಕ ಕೆ.ನೇಮಿರಾಜನಾಯ್ಕ.ಹರಿಹರದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್. ದಾವಣಗೆರೆ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ. ವಿಜಯನಗರ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶಪ್ಪ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶಿರಹಟ್ಟಿ ದಂಡೆಪ್ಪ ತಿಳಿಸಿದ್ದಾರೆ.