ಹರಪನಹಳ್ಳಿ, ಏ.11- ದ್ವಿತೀಯ ಪಿಯು ಪರೀಕ್ಷೆಯಲ್ಲಿ, ತಾಲ್ಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕಗಳಿಂದ ಉತ್ತೀರ್ಣರಾಗಿದ್ದಾರೆ. ಪಟ್ಟಣದ ಎಸ್.ಎಚ್ ಜೈನ್ ಪದವಿಪೂರ್ವ ಕಾಲೇಜಿನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಸೇರಿ ಒಟ್ಟು ಶೇ.66.97ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ಬಿ. ಬಸವರಾಜ್ ತಿಳಿಸಿದ್ದಾರೆ.
ಪಟ್ಟಣದ ಬಂಗಿ ಬಸಪ್ಪ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಿಂದ ಒಟ್ಟು 218 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 29 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 116 ವಿದ್ಯಾರ್ಥಿಗಳು ಪ್ರಥಮ, 31 ವಿದ್ಯಾರ್ಥಿಗಳು ದ್ವಿತೀಯ, 2 ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದ್ದಾರೆ.
563 ಅಂಕ ಗಳಿಸಿದ ಎಂ.ಎಸ್. ಅಲ್ತಾಪ್ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದರೆ, ಜೆ. ವೀರೇಶ್ 561 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಅರುಣಕುಮಾರ್ ತಿಳಿಸಿ ದ್ದಾರೆ. ತಾಲ್ಲೂಕಿನ ನಜೀರ್ ನಗರದ ನಿಸರ್ಗ ಪದವಿಪೂರ್ವ ಕಾಲೇಜಿಗೆ 86.79 ಫಲಿತಾಂಶ ಬಂದಿದ್ದು, ಕಾಲೇಜಿನ 53 ವಿದ್ಯಾರ್ಥಿಗಳ ಪೈಕಿ, 3 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 32 ಪ್ರಥಮ ಸ್ಥಾನ, 9 ಜನ ದ್ವಿತೀಯ, ಮೂವರು ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ.
ಮೈದೂರು ಗ್ರಾಮದ ಕೆ. ಅರುಣ್ 542 ಅಂಕಗಳು, ಬೈರಾಪುರ ಗ್ರಾಮದ ಎನ್. ಕಿರಣ್ ಕುಮಾರ್ 538 ಅಂಕಗಳು ಹಾಗೂ ಜೆ. ಗಗನ್ 533 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿ ದ್ದಾರೆ ಎಂದು ಪ್ರಾಚಾರ್ಯ ಕಲ್ಯಾಣದವರ್ ತಿಳಿಸಿದ್ದಾರೆ.