ದಾವಣಗೆರೆ, ಏ. 10- ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ವತಿಯಿಂದ ನಾಡಿದ್ದು ದಿನಾಂಕ 12ರ ಶುಕ್ರವಾರದಿಂದ ಒಂದು ವಾರಗಳ ಕಾಲ ಮಕ್ಕಳಿಗಾಗಿ ಸಂಸ್ಕಾರ ಶಿಬಿರ ಹಾಗೂ ಸಿದ್ಧ ಸಮಾಧಿ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಶುಕ್ರವಾರ ಸಂಜೆ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದೆ ಎಂದು ರೇಣುಕಾ ಮಾತಾಜಿ ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸುವ ಮೊಬೈಲ್ ಸಂಖ್ಯೆ : 9448667523, 9964675441, 9731993770.
January 23, 2025