ದ್ವಿತೀಯ ಪಿಯುಸಿ : ದಿ ಟೀಮ್ ಅಕಾಡೆಮಿಗೆ 99.99

ದಾವಣಗೆರೆ, ಏ. 10 – ನಗರದ ದಿ ಟೀಮ್ ಅಕಾಡೆಮಿಗೆ ದ್ವಿತೀಯ ಪಿಯುಸಿಯಲ್ಲಿ ಶೇ. 99.99 ಫಲಿತಾಂಶ ಲಭಿಸಿದೆ. 

526 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು, 524 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಕಾಲೇಜಿಗೆ ಶೇ. 99.99 ಒಟ್ಟು ಫಲಿತಾಂಶ ತಂದಿರುತ್ತಾರೆ. ಸ್ಪೂರ್ತಿ ಎಸ್. ಸಂಕಣ್ಣನವರ್ ಮತ್ತು ತನುಜಾ ಡಿ 600 ಅಂಕಗಳಿಗೆ 587  ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. 309  ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 205 ವಿದ್ಯಾರ್ಥಿಗಳು ಪ್ರಥಮ ದರ್ಜೆ, 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. 

ಕನ್ನಡ ಭಾಷಾ ವಿಷಯದಲ್ಲಿ 06, ಸಂಸ್ಕೃತ ವಿಷಯದಲ್ಲಿ 04, ರಸಾಯನ ಶಾಸ್ತ್ರ ವಿಷಯದಲ್ಲಿ 06, ಗಣಿತ ವಿಷಯದಲ್ಲಿ 10, ಜೀವ ಶಾಸ್ತ್ರ ವಿಷಯದಲ್ಲಿ 16, ಗಣಕ ವಿಜ್ಞಾನ ವಿಷಯದಲ್ಲಿ 5 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿರುತ್ತಾರೆ.

ಎಲ್ಲಾ ವಿದ್ಯಾರ್ಥಿಗಳನ್ನು ಮಂಜಪ್ಪ ಕೆ.ಎಂ. (ಅಧ್ಯಕ್ಷರು, ದಿ ಟೀಮ್ ಅಕಾಡೆಮಿ) ಎಸ್.ವಿ.ವಿ.ಆರ್. ಭೂಷಣಮ್ (ಕಾರ್ಯದರ್ಶಿ ದಿ ಟೀಮ್ ಅಕಾಡೆಮಿ) ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು. ಸಿಬ್ಬಂದಿ ವರ್ಗದವರಿಂದ ಅಭಿನಂದಿಸಿದ್ದಾರೆ.

error: Content is protected !!