ಸಿದ್ಧಗಂಗಾ ವಿಜ್ಞಾನ ಕಾಲೇಜಿಗೆ ಶೇ. 98.83 ಫಲಿತಾಂಶ

ದಾವಣಗೆರೆ ಏ.10- ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು  ನಗರದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿಗೆ ಶೇ.98.83ರಷ್ಟು ಫಲಿತಾಂಶ ದೊರಕಿದೆ.

ಪರೀಕ್ಷೆಗೆ ಹಾಜರಾದ 939 ಮಕ್ಕಳಲ್ಲಿ 612 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಷಯವಾರು ನೂರಕ್ಕೆ ನೂರು ಅಂಕಗಳನ್ನು 82 ಮಕ್ಕಳು ಪಡೆದಿದ್ದಾರೆ.  ಕನ್ನಡ 17, ಗಣಿತ 31, ಜೀವಶಾಸ್ತ್ರ 24, ಕಂಪ್ಯೂಟರ್‌ ಸೈನ್ಸ್ 2, ರಸಾಯನಶಾಸ್ತ್ರ 6, ಸಂಸ್ಕೃತ 1, ಹಿಂದಿ 1. 

ಶೇ.95ಕ್ಕಿಂತ  ಅಧಿಕ ಅಂಕ ಪಡೆದವರ ಸಂಖ್ಯೆ 77, 369 ಮಕ್ಕಳು ಶೇ.90ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. 612 ಮಕ್ಕಳು ಶೇ.85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

600ಕ್ಕೆ 591 ಗಳಿಸಿರುವ ತರನಂ ಸುಲ್ತಾನ ಇಂಗ್ಲೀಷ್‌ 95, ಹಿಂದಿ 100, ಭೌತಶಾಸ್ತ್ರ 96, ರಸಾಯನಶಾಸ್ತ್ರ, ಗಣಿತಶಾಸ್ತ್ರ ಹಾಗೂ ಜೀವಶಾಸ್ತ್ರದಲ್ಲಿ ತಲಾ 100 ಅಂಕಗಳನ್ನು ಗಳಿಸಿದ್ದಾಳೆ. ಹಾಗೂ ಲಾಸ್ಯ ಪಿ ಶೆಟ್ಟಿ ಇಂಗ್ಲಿಷ್‌ 96, ಕನ್ನಡ 99, ಭೌತಶಾಸ್ತ್ರ 98, ರಸಾಯನಶಾಸ್ತ್ರ 100, ಗಣಿತಶಾಸ್ತ್ರ 100 ಮತ್ತು ಜೀವಶಾಸ್ತ್ರ 98 ಗಳಿಸಿದ್ದಾಳೆ.

error: Content is protected !!